ನಿತೀಶ್ ನನ್ನ ರಾಜಕೀಯ ಗುರು ಎಂದು ಬಣ್ಣಿಸಿದ ಲಾಲು ಪುತ್ರ

ಸೋಮವಾರ, 8 ಫೆಬ್ರವರಿ 2016 (14:33 IST)
ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಹಿರಿಯ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತಮ್ಮ 'ರಾಜಕೀಯ ಗುರು' ಎಂದು ಬಣ್ಣಿಸಿದ್ದು ಅವರಿಂದ ತಾವು ಉತ್ತಮ ಆಡಳಿತದ ಪಾಠವನ್ನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ. 

ಬಿಹಾರ್ ವಿಧಾನಸಭೆಯ 95ನೇ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, 'ನಾನು ನಿತೀಶ ಅವರನ್ನು ರಾಜಕೀಯ ಗುರುವಾಗಿ ನೋಡುತ್ತೇನೆ', ಎಂದಿದ್ದಾರೆ.
 
'ಅವರು ಜಾತ್ಯತೀತ ಸಮ್ಮಿಶ್ರ ಸರ್ಕಾರದ ಮಖ್ಯಸ್ಥರಾಗಿದ್ದು, ಅವರದೇ ಶೈಲಿಯಲ್ಲಿ ಆಡಳಿತ ನಡೆಸುತ್ತಾರೆ. ಅವರ ಕಾರ್ಯವೈಖರಿಯನ್ನು ನಾನು ಮತ್ತು ಉಳಿದ ಯುವಕರು ಕಲಿತುಕೊಳ್ಳುತ್ತಿದ್ದೇವೆ', ಎಂದು ಅವರು ಹೇಳಿದ್ದಾರೆ. 
 
'ಅವರಿಗೆ ಮುಖ್ಯಮಂತ್ರಿ ನಾಯಕತ್ವದ ಗುಣವಿದೆ. ಅವರ ನಾಯಕತ್ವದಲ್ಲಿ ಬಿಹಾರ್ ಅಭಿವೃದ್ಧಿಯತ್ತ ಸಾಗುತ್ತಿದೆ', ಎಂದು ತೇಜಸ್ವಿ ಅಭಿಪ್ರಾಯ ಪಟ್ಟಿದ್ದಾರೆ. 
 
ತಾವೊಬ್ಬ ಉತ್ತಮ ವಿದ್ಯಾರ್ಥಿ ಎಂದು ಉಪಮುಖ್ಯಮಂತ್ರಿ ವಿಧಾನಸಭೆಯ ಹಿರಿಯ ಸದಸ್ಯರು ನಮ್ಮಂತಹ ಯುವಕರಿಗೆ ಪೋಷಕರಿದ್ದ ಹಾಗೆ  ಎಂದಿದ್ದಾರೆ
 
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರರಾಗಿರುವ ತೇಜಸ್ವಿ ನವೆಂಬರ್ 20 ರಂದು ಪದಗ್ರಹಣ ಮಾಡುವ ಮುನ್ನ ವೇದಿಕೆಯಲ್ಲಿಯೇ ನಿತೀಶ್ ಕುಮಾರ್ ಅವರ ಪಾದ ಮುಟ್ಟಿ ನಮಸ್ಕರಿಸಿದ್ದರು. 

ವೆಬ್ದುನಿಯಾವನ್ನು ಓದಿ