ರಾಹುಲ್ ಗಾಂಧಿಯನ್ನು ಅಪ್ಪಿಕೊಂಡು ತಬ್ಬಿಬ್ಬುಗೊಳಿಸಿದ ಲಾಲು ಯಾದವ್

ಶನಿವಾರ, 21 ನವೆಂಬರ್ 2015 (15:47 IST)
ಬಿಹಾರ್ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ತಳ್ಳಿಹಾಕುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು, ನಿತೀಶ್ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಲಾಲು ಯಾದವ್ ರಾಹುಲ್ ಗಾಂಧಿಯನ್ನು ಅಪ್ಪಿಕೊಂಡು ಅಚ್ಚರಿ ಮೂಡಿಸಿದರು.
  
ನಿತೀಶ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕ ಸುಮಾರು ಒಂದು ಗಂಟೆಗಳ ಕಾಲ ವಿಳಂಬವಾಗಿ ಆಗಮಿಸಿದ ರಾಹುಲ್ ಗಾಂಧಿ, ಜನತೆಗೆ ನಮಸ್ಕಾರ ಮಾಡಿ ಮಾಜಿ ಪ್ರಧಾನಿ ದೇವೇಗೌಡರ ಬದಿಯಲ್ಲಿ ಕುಳಿತಿದ್ದರು. ದೇವೇಗೌಡರ ಮತ್ತೊಂದು ಬದಿಯಲ್ಲಿ ಲಾಲು ಯಾದವ್ ಕುಳಿತಿದ್ದರೂ ರಾಹುಲ್ ನಿರ್ಲಕ್ಷ್ಯವಹಿಸಿದ್ದರು. ಆದರೆ, ಕೆಲ ಕ್ಷಣಗಳ ನಂತರ ಇಬ್ಬರು ಕೈಕುಲುಕಿಸಿದರು. 
 
ನಂತರ ರಾಹುಲ್ ಎದ್ದು ನಿಂತು ಎಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸಿದರು. ನಂತರ ಮತ್ತೊಂದು ಬದಿಯಲ್ಲಿ ಕುಳಿತಿದ್ದ ಬಿಜೆಪಿ ನಾಯಕರಾದ ಸುಶೀಲ್ ಮೋದಿ ಮತ್ತು ನಂದ್ ಕಿಶೋರ್ ಯಾದವ್‌ರನ್ನು ಕೂಡಾ ಅಭಿನಂದಿಸಿದರು. 
 
ತದನಂತರ ರಾಹುಲ್ ತಮ್ಮ ಸೀಟಿಗೆ ಮರಳುವಾಗ ಲಾಲು ಎದ್ದು ನಿಂತು ರಾಹುಲ್ ಗಾಂಧಿಯನ್ನು ಅಪ್ಪಿಕೊಂಡು ಅಚ್ಚರಿ ಮೂಡಿಸಿದರು. ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್‌ರನ್ನು ಅಪ್ಪಿಕೊಂಡು ಜನಸ್ತೋಮದತ್ತ ಕೈಬೀಸಿದ ಲಾಲು ತಮ್ಮ ಜಯಭೇರಿಯನ್ನು ದೇಶದ ಮೂಲೆ ಮೂಲೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇನೆ ಎನ್ನುವ ಸಂದೇಶ ಸಾರುವಂತಿತ್ತು.

ವೆಬ್ದುನಿಯಾವನ್ನು ಓದಿ