ಬಿಹಾರ್ ಚುನಾವಣೆ: ಮುಲಾಯಂ ಸಿಂಗ್ ಮನವೊಲಿಸುವ ಹೊಣೆ ಲಾಲು ಯಾದವ್‌ಗೆ

ಶುಕ್ರವಾರ, 4 ಸೆಪ್ಟಂಬರ್ 2015 (15:27 IST)
ಸೀಟು ಹಂಚಿಕೆಯಲ್ಲಿ ಅಸಮಧಾನಗೊಂಡು ಜನತಾ ಪರಿವಾರದಿಂದ ಹೊರಬಂದಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್‌ ಅವರನ್ನು ಆರ್‌ಜೆಡಿ ಮುಖ್ಯಸ್ಶ ಲಾಲು ಯಾದವ್ ಮತ್ತು ಜೆಡಿಯು ನಾಯಕ ಕೆ.ಸಿ.ತ್ಯಾಗಿ ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನಮ್ಮ ನಾಯಕರು ಅವರನ್ನು ನಮ್ಮನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಇಂದು ನಡೆಯುತ್ತಿರುವ ಚರ್ಚೆಯ ನಂತರ ಅಂತರಿಕ ಬಿಕ್ಕಟ್ಟುಗಳು ಪರಿಹಾರವಾಗಲಿವೆ ಎಂದು ಕೆ.ಸಿ ತ್ಯಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಮೈತ್ರಿಕೂಟದಿಂದ ಸಮಾಜವಾದಿ ಪಕ್ಷ ಹೊರಬಂದಿರುವ ಸಂಪೂರ್ಣ ಘಟನೆ ದುರದೃಷ್ಟಕರ ಸಂಗತಿ. ಮುಲಾಯಂ ಸಿಂಗ್ ಮತ್ತೆ ಮೈತ್ರಿಕೂಟಕ್ಕೆ ಬಂದರೆ ಸಾಕು ಎಂದು ಹೇಳಿದ್ದಾರೆ.
 
ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ 243 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷಕ್ಕೆ ಕೇವಲ ಐದು ಸೀಟುಗಳನ್ನು ನೀಡಲಾಗಿರುವುದನ್ನು ವಿರೋಧಿಸಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಜನತಾ ಪರಿವಾರದ ಮೈತ್ರಿಕೂಟದಿಂದ ಹೊರಬಂದಿತ್ತು.

ವೆಬ್ದುನಿಯಾವನ್ನು ಓದಿ