ಪಿಓಕೆ ಮುಕ್ತಿಗೆ ಚಳುವಳಿ ಆರಂಭಿಸಿ: ಬಾಬಾ ರಾಮದೇವ್

ಶನಿವಾರ, 30 ಜುಲೈ 2016 (16:28 IST)
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜುಲೈ 21 ರಂದು ನಡೆದ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು  ಆರೋಪಿಸಿ ಜನರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಯೋಗ ಗುರು ಬಾಬಾ ರಾಮ್‌ದೇವ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮುಕ್ತಿಗೆ ಚಳವಳಿ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

" ಪಿಓಕೆ ಮುಕ್ತಿಗಾಗಿ ಪ್ರಧಾನಿ ಮೋದಿ ಚಳುವಳಿಯನ್ನು ಆರಂಭಿಸಬೇಕು. ಯಾವುದೇ ಬೆಲೆ ತೆತ್ತಾದರೂ ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಹೇಳುವ ಧೈರ್ಯ ಶರೀಫ್ ಅವರಿಗಿದೆ. ನಮ್ಮ ಮಕ್ಕಳು ಕೇವಲ ನಕಾಶೆಯಲ್ಲಿ ಕಾಶ್ಮೀರವನ್ನು ನೋಡುತ್ತಾರೆ. ಆದರೆ ಪಾಕಿಸ್ತಾನ ಅದನ್ನು ವಶಪಡಿಸಿಕೊಂಡಿದೆ. ಹೇಡಿ ದೇಶ ಮಹಾನ್ ದೇಶಧ ಭಾಗವನ್ನು ವಶಪಡಿಸಿಕೊಂಡಿದ್ದಪೂ ನಾವು ಮೌನವಾಗಿ ಕುಳಿತಿದ್ದೇವೆ ಎಂದು ರಾಮದೇವ್ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನವಾಜ್ ಷರೀಫ್‌ರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷ 41 ಸ್ಥಾನಗಳ ಪೈಕಿ 32 ಸ್ಥಾನಗಳಲ್ಲಿ ಜಯಗಳಿಸಿದ್ದು, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಾಬಾ ರಾಮದೇವ್ ಪಿಓಕೆಯನ್ನು ಮರಳಿ ಪಡೆಯುವ ಮಾತುಗಳನ್ನಾಡಿದ್ದಾರೆ.

ನೀಲುಂ ಕಣಿವೆಯಲ್ಲಿ ಸ್ಥಳೀಯರು ಪಾಕ್ ಧ್ವಜವನ್ನು ಸುಟ್ಟು ಹಾಕುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದು  ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮುಜಫರಾಬಾದ್, ಕೊಟ್ಲಿ, ಚಿನಾರಿ ಮತ್ತು ಮಿರ್‌ಪುರ್‌ನಲ್ಲಿ ಪ್ರತಿಭಟನೆ ತಾರಕಕ್ಕೇರಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ