ಇಸ್ರೋ ಸಾಧನೆಗೆ ಮತ್ತೊಂದು ಕಿರೀಟ: ಹೆಮ್ಮೆಯ 25ನೇ ಉಪಗ್ರಹ ಯಶಸ್ವಿ ಉಡಾವಣೆ

ಗುರುವಾರ, 27 ಆಗಸ್ಟ್ 2015 (17:20 IST)
ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಇಂದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಭಾರತದ ಹೆಮ್ಮೆಯ 25ನೇ ಉಪಗ್ರಹ ಯಶಸ್ವಿಯಾಗಿ ಉಡಾವಣೆ ನಡೆಸಿದೆ
 
ಆಂಧ್ರಪ್ರದೇಶದ ಶ್ರೀ ಹರಿಕೋಟಾ ಉಡಾವಣೆ ನಿಲ್ದಾಣದಿಂದ ಉಪಗ್ರಹ ಗಗನಕ್ಕೆ ಚಿಮ್ಮಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
 
ಇಸ್ರೋ ನಿರ್ಮಿಸಿದ ಭಾರತದ 25ನೇ ನೂತನ ಸಂವಹನ ಉಪಗ್ರಹ ಜಿಸ್ಯಾಟ್- 6 ಇಂದು ಸಂಜೆ ಸತೀತ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಾಯಿತು.
 
ಈ ಮೂಲಕ  ಭಾರತ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಉಪಗ್ರಹವು ಸೇನೆಗೆ ಸಂಬಂಧಿಸಿದ ಕಾರ್ಯಾಚರಣೆ ನೆರವು ನೀಡಲಿದ್ದು, ಸಂವಹನಕ್ಕೆ ಉಪಕಾರಿಯಾಗಲಿದೆ.
 

ವೆಬ್ದುನಿಯಾವನ್ನು ಓದಿ