ಮೂತ್ರ ಮಾಡಲು ಶೌಚಾಲಯಕ್ಕೆ ಹೋಗಲು ಬಿಡಿ ಮಾರಾಯರ್ರೆ: ಬಿಜೆಪಿ ನಾಯಕರಿಗೆ ರಾಹುಲ್ ಮನವಿ

ಗುರುವಾರ, 3 ಮಾರ್ಚ್ 2016 (14:57 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಸತ್‌ನಲ್ಲಿ ಮಾಡಿದ ಭಾಷಣ ಅಧ್ಬುತವಾಗಿದ್ದು, ಪ್ರತಿಯೊಬ್ಬ ಸದಸ್ಯರ ಪ್ರಶಂಸೆಗೆ ಒಳಗಾಯಿತು. ಭಾಷಣದ ನಂತರ ರಾಹುಲ್, ಸದನದಿಂದ ಹೊರಗೆ ಹೋಗುವುದನ್ನು ಬಿಜೆಪಿ ಸದಸ್ಯರು ತಡೆದಾಗ , ನನಗೆ ಮೂತ್ರವಾದರೂ ಮಾಡಲು ಅವಕಾಶ ಕೊಡಿಯಪ್ಪ ಎಂದು ರಾಹುಲ್ ಗಾಂಧಿ ಕೋರಿದಾಗ ಸದನ ಸಂಪೂರ್ಣವಾಗಿ ನಗೆಗಡಲಲ್ಲಿ ತೇಲಿತು.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರಕಾರದ ವಿರುದ್ಧ ಕಪ್ಪು ಹಣ ಕುರಿತಂತೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇದೊಂದು ಫೇರ್ ಆಂಡ್ ಲವ್ಲಿ ಯೋಜನೆ ಎಂದು ಟೀಕಿಸಿದರು. ಜೆಎನ್‌ಯು ಮತ್ತು ಹೈದ್ರಾಬಾದ್ ವಿಶ್ವವಿದ್ಯಾಲಯ ಪ್ರಕರಣ ಕುರಿತಂತೆ ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಾಗ್ದಾಳಿ ನಡೆಸಿ, ಸದನದಿಂದ ಹೊರಗೆ ಹೋಗಲು ಯತ್ನಿಸಿದಾಗ ಬಿಜೆಪಿ ಸದಸ್ಯರು ಅವರನ್ನು ಹೊರಗೆ ತೆರಳದಂತೆ ಅಡ್ಡಿಪಡಿಸಿದರು.
 
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ, ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ದನಾಗಿದ್ದೇನೆ. ಆದರೆ, ರಾಹುಲ್ ಸದನದಲ್ಲಿರಲು ತಯಾರಿಲ್ಲ ಎಂದು ಲೇವಡಿ ಮಾಡಿದರು.  
 
ಇತರರ ಆರೋಪಗಳನ್ನು ಕೇಳಲು ರಾಹುಲ್ ಸಿದ್ದರಾಗಿರಬೇಕು ಎಂದು ಕೆಲ ಬಿಜೆಪಿ ಸದಸ್ಯರು ಟೀಕಿಸಿದಾಗ, ರಾಹುಲ್ ಗಾಂಧಿ, ತಮ್ಮ ಸೀಟ್ ಬಳಿ ಬಂದು, ಮೂತ್ರ ಮಾಡಲು ಶೌಚಾಲಯಕ್ಕೆ ಹೋಗಲು ಬಿಡಿ ಎಂದು ಮನವಿ ಮಾಡಿದರು. 
 
ರಾಹುಲ್ ಹೇಳಿಕೆ ನೀಡುತ್ತಿದ್ದಂತೆ ಸದನ ಸಂಪೂರ್ಣವಾಗಿ ನಗೆಗಡಲಲ್ಲಿ ತೇಲಿತು, ಸದನದಿಂದ ಹೊರ ಹೋಗಿದ್ದ ರಾಹುಲ್, ಕೆಲ ನಿಮಿಷಗಳ ನಂತರ ತಮ್ಮ ಸೀಟ್‌ಗೆ ಮರಳಿದರು.
 

ವೆಬ್ದುನಿಯಾವನ್ನು ಓದಿ