ಪ್ರಮಾಣ ವಚನ ಸ್ವೀಕರಿಸಲು ಪವಿತ್ರ ಗ್ರಂಥಗಳ ಬದಲಿಗೆ ಸಂವಿಧಾನ ಸೂಕ್ತ: ಶಿವಸೇನೆ

ಸೋಮವಾರ, 30 ನವೆಂಬರ್ 2015 (20:23 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಪವಿತ್ರ ಗ್ರಂಥಗಳ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಬದಲು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುವುದು ಕಡ್ಡಾಯಗೊಳಿಸಬೇಕು. ಇದರಿಂದ ಧರ್ಮ ಆಧಾರಿತ ರಾಜಕೀಯಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದು ಶಿವಸೇನೆ ಕೋರಿದೆ.
 
ದೇಶದ ಸಂವಿಧಾನ ಪ್ರತಿಯೊಂದು ಸಮುದಾಯದವರಿಗೆ ಧರ್ಮಗ್ರಂಥವಿದ್ದಂತೆ. ಕಾನೂನಿನ ಎದುರು ಎಲ್ಲಾ ಧರ್ಮಗಳು ಸಮಾನವಾಗಿವೆ ಎಂದು ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಹೇಳುತ್ತಿದ್ದರು ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಲಾಗಿದೆ. 
 
ಕಾನೂನಿನ ಎದುರು ಪ್ರತಿಯೊಬ್ಬರು ಸರಿಸಮಾನರು. ಆದರೆ, ಕಾನೂನಿನ ಎದುರು ಸಂವಿಧಾನ ಸುಪ್ರೀಂ. ಆದ್ದರಿಂದ, ರಾಜಕಾರಣಿಗಳು ಪವಿತ್ರ ಗ್ರಂಥಗಳ ಮೇಲೆ ಪ್ರಮಾಣ ಮಾಡುವುದಕ್ಕಿಂತ ಸಂವಿಧಾನದ ಮೇಲೆ ಪ್ರಮಾಣ ಮಾಡುವುದು ಸೂಕ್ತ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ. 
 
ಡಾ.ಬಿ.ಆರ್‌.ಅಂಬೇಡ್ಕರ್ ರಚಿತ ಸಂವಿಧಾನವನ್ನು ಬದಲಿಸುವ ಯೋಚನೆ ಮಾಡುವುದು ಆಘಾತಕಾರಿ ಸಂಗತಿ. ಸಂವಿಧಾನ ಕೂಡಾ ಪವಿತ್ರ ಗ್ರಂಥ ಎಂದು ಪ್ರಧಾನಿ ಹೇಳಿರುವುದಾಗಿ ಶಿವಸೇನೆ ಪ್ರಕಟಿಸಿದೆ. 
 
ಪ್ರಧಾನಿ ಮೋದಿ ಧರ್ಮ ಆಧಾರಿತ ರಾಜಕೀಯವನ್ನು ದೂರವಿಡಲು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಒತ್ತಾಯಿಸಿದೆ.

ವೆಬ್ದುನಿಯಾವನ್ನು ಓದಿ