ಉಪರಾಜ್ಯಪಾಲರು ದೆಹಲಿಯ ಚುನಾಯಿತ ಸರ್ಕಾರವಲ್ಲ: ಆಪ್

ಶನಿವಾರ, 29 ಆಗಸ್ಟ್ 2015 (17:55 IST)
ಉಪರಾಜ್ಯಪಾಲರು ಮತ್ತು ದೆಹಲಿ ಸರ್ಕಾರದ ನಡುವಿನ ಜಟಾಪಟಿ ಕೋರ್ಟ್ ಮೆಟ್ಟಿಲೇರಿದ್ದು  ನಿಮಗೆ ತಿಳಿದಿರಲಿಕ್ಕೆ ಸಾಕು. ಈ ಕುರಿತು ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಪ್,  ಉಪರಾಜ್ಯಪಾಲರು ದೆಹಲಿಯ ಚುನಾಯಿತ ಸರ್ಕಾರವಲ್ಲ, ಅವರು ಸರ್ಕಾರದ ಕಾರ್ಯದಲ್ಲಿ ನೆರವು ನೀಡಬೇಕು ಮತ್ತು ಸಲಹೆ ನೀಡಬೇಕಷ್ಟೇ ಎಂದು ಹೇಳಿದೆ. 
 
ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಹುದ್ದೆಗಳಲ್ಲಿ ಅಧಿಕಾರಿಗಳನ್ನು ನೇಮಿಸಲು ಎಲ್‌ಜಿಗೆ ನಿರಂಕುಶ ಅಧಿಕಾರವನ್ನು ನೀಡುವ ಮತ್ತು ಕೇಂದ್ರದ ನಿಯಂತ್ರಣದಲ್ಲಿರುವ ಯಾವುದೇ ಸಿಬ್ಬಂದಿ ವಿರುದ್ಧ  ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ)ದ ನಿಯಂತ್ರಣವಿಲ್ಲದಿರುವ ಕುರಿತಾದ ಕೇಂದ್ರದ ಮೇ 21 ಅಧಿಸೂಚನೆಯನ್ನು ಪ್ರಶ್ನಿಸಿ ಆಪ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ವಿ.ಪಿ. ವೈಶ್ ನೇತೃತ್ವದ ನ್ಯಾಯಪೀಠ ದೆಹಲಿ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯ ವಾದಪ್ರತಿವಾದಗಳನ್ನು ಆಲಿಸಿತು.  
 
ಸಂವಿಧಾನಾತ್ಮಕ ಕಟ್ಟುಪಾಡುಗಳ ಮತ್ತು ವ್ಯವಹಾರ ನಿಯಮಗಳ ಅಡಿಯಲ್ಲಿ, ಎಲ್‌ಜಿ  ಸಚಿವರಿಗೆ ನೆರವು ಮತ್ತು ಸಲಹೆ ನೀಡುವ  ಕಾರ್ಯವನ್ನು ಮಾಡಬೇಕು ಎಂದು  ಹಿರಿಯ ವಕೀಲ ದಯನ್ ಕೃಷ್ಣನ್ ಕೋರ್ಟ್ ಮುಂದೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ