ವಿರೋಧ ಪಕ್ಷಗಳ ಗದ್ದಲ: 30 ನಿಮಿಷ ಮುಂದೂಡಲ್ಪಟ್ಟ ಲೋಕಸಭೆ

ಸೋಮವಾರ, 27 ಜುಲೈ 2015 (16:25 IST)
ಒಂದು ವಾರದ ಕಲಾಪ ಸಂಪೂರ್ಣವಾಗಿ ಕೋಲಾಹಲದಲ್ಲಿ ಕೊಚ್ಚಿ ಹೋದ ಬಳಿಕ ಇಂದು ಮತ್ತೆ ಆರಂಭವಾದ ಲೋಕಸಭೆಯ ಕಲಾಪ ಮತ್ತದೇ ಗದ್ದಲಕ್ಕೆ ಆಹುತಿಯಾಗಿ 30 ನಿಮಿಷ ಮುಂದೂಡಲ್ಪಟ್ಟಿತು. ಲಲಿತ್ ಮೋದಿ, ವ್ಯಾಪಮ್ ಮತ್ತು ಇತರ ವಿಷಯಗಳನ್ನಿಟ್ಟುಕೊಂಡು ನಡೆದ ಗಲಾಟೆಯಿಂದಾಗಿ ಪ್ರಶ್ನೋತ್ತರ ಅವಧಿಯಲ್ಲಿ ಕೇವಲ ಮೂರು ಪ್ರಶ್ನೆಗಳು ಕೇಳಲ್ಪಟ್ಟ ಬಳಿಕ ಕಲಾಪ ಮುಂದೂಡಲ್ಪಟ್ಟಿತು. 

ಕಲಾಪ ಆರಂಭವಾದ ತಕ್ಷಣ, ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ  ಐಪಿಎಲ್ ಹಗರಣದ ಮೇಲಿನ ನಿಲುವಳಿ ಸೂಚನೆಗಳನ್ನು ತಿರಸ್ಕರಿಸಿದ್ದಾಗಿ ಸದಸ್ಯರಿಗೆ ತಿಳಿಸಿದರು.
 
 ತಮ್ಮ ತೋಳುಗಳ ಮೇಲೆ ಕಪ್ಪು ಬ್ಯಾಂಡ್ ಕಟ್ಟಿಕೊಂಡು ಕ್ರೀಡಾ ಕಾಂಗ್ರೆಸ್ ಸದಸ್ಯರು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ರಾಜೀನಾಮೆ ಆಗ್ರಹಿಸಿದರು ಮತ್ತು ಈ ವಿವಾದದ ಬಗ್ಗೆ  "ಮೌನ" ವಹಿಸಿರುವ ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು.
 
ಪೋಸ್ಟ್ ಕಾರ್ಡ್ ಹಿಡಿದು ಪ್ರತಿಭಟಿಸಿದ ಸಮಾಜವಾದಿ ಪಕ್ಷದ ಸಂಸದರು ಜಾತಿ ಆಧಾರಿತ ಜನಗಣತಿ ಆರಂಭಿಸಬೇಕೆಂದು ಆಗ್ರಹಿಸಿದರು.
 
ಭೂ ಸ್ವಾಧೀನ ಮಸೂದೆಯನ್ನು ಕೈ ಬಿಡುವಂತೆ ವಿರೋಧ ಪ್ರದರ್ಶಿಸಿದ ತೃಣಮೂಲ ಕಾಂಗ್ರೆಸ್ ಸಂಸದರು,  ಕಿಸಾನ್ ರೋ ರಹಾ ಹೈ, ಮೋದಿ ಸರ್ಕಾರ ಶೋ ರಹಾ ರೈ( ರೈತ ಅಳುತ್ತಿದ್ದಾನೆ, ಮೋದಿ ಸರ್ಕಾರ ನಿದ್ದೆ ಮಾಡುತ್ತಿದೆ) ಎಂದು ಘೋಷಣೆಗಳನ್ನು ಕೂಗಿದರು. 

ವೆಬ್ದುನಿಯಾವನ್ನು ಓದಿ