ತಿರುಮಲಾ ಪ್ರದೇಶವನ್ನು ಸ್ಮಾರ್ಟ್ ಸಿಟಿಯಾಗಿ ಬದಲಿಸಿಲು ಟಿಟಿಡಿ ನಿರ್ಧಾರ

ಮಂಗಳವಾರ, 1 ಸೆಪ್ಟಂಬರ್ 2015 (20:00 IST)
ಕೇಂದ್ರ ಸರಕಾರ ತಿರುಪತಿಯನ್ನು ಸ್ಮಾರ್ಟ್ ಸಿಟಿ ಪ್ರೊಜೆಕ್ಟ್ ವ್ಯಾಪ್ತಿಗೆ ಒಳಪಡಿಸಿದೆ. ಇದೀಗ ಟಿಟಿಡಿ ತಿರುಮಲಾ ಪ್ರದೇಶವನ್ನು ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತಿಸಲು ಟಿಟಿಡಿ ನಿರ್ಧರಿಸಿದೆ  
 
ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಈಗಾಗಲೇ ಆನ್‌ಲೈನ್ ಮುಖಾಂತರ ಟಿಕೆಟ್ ನೀಡಲಾಗುತ್ತಿದೆ ಟಿಕೆಟ್ ಮತ್ತು ವಸತಿ ಗೃಹ ಬುಕ್ ಮಾಡಲು ಹೊಸ ತಂತ್ರಜ್ಞಾನವನ್ನು ಬಳಸಲು ಟಿಟಿಡಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
 
ತಿರುಮಲಾದಲ್ಲಿ ತಿಮ್ಮಪ್ಪನ ಭಕ್ತರಿಗೆ ಅತ್ಯುತ್ತಮ ಸೌಲಭ್ಯ ಒದಗಿಸುವಂತಾಗಲು ಅಧ್ಯಯನ ನಡೆಸಿ ಹೊಸ ತಂತ್ರಜ್ಞಾನ ಪರಿಚಯಿಸಿ ವರದಿ ಸಲ್ಲಿಸುವಂತೆ ಟಾಟಾ ಕನ್ಸಲ್‌ಟನ್ಸಿ ಮತ್ತು ಜಾಗತಿಕ ದೈತ್ಯ ಕಂಪೆನಿಯಾದ ಮೈಕ್ರೋಸಾಫ್ಟ್‌ಗೆ ಹೊಣೆಯನ್ನು ವಹಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.  
 
ತಿರುಮಲಾ ಪ್ರದೇಶ ಸದಾ ಹಸಿರಿನಿಂದ ಕಂಗೊಳಿಸುವಂತಾಗಲು ಬಿಲ್ಡ್-ಆಪರೇಟ್-ಟ್ರಾನ್ಸ್‌‍ಫರ್ ಮಾದರಿಯನ್ನು ಅಳವಡಿಸಲು ಹಾಗೂ ನೀರು ಸಂರಕ್ಷಣಾ ಯೋಜನೆ ಅಳವಡಿಸಲು ಟಿಟಿಡಿ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ