ಧೋನಿ ಪಡೆಗೆ ಅಭಿನಂದನೆ ಸಲ್ಲಿಸಿದ ಮೋದಿ

ಮಂಗಳವಾರ, 22 ಜುಲೈ 2014 (08:49 IST)
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅಭೂತಪೂರ್ಣ ಗೆಲುವು ಸಾಧಿಸಿರುವ ಭಾರತೀಯ ತಂಡಕ್ಕೆ ಪ್ರಧಾನಿ  ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಈ ಅತ್ಯುತ್ತಮ ಪ್ರದರ್ಶನ ನನ್ನಲ್ಲಿ ಗರ್ವ ಮೂಡಿಸಿದೆ ಎಂದಿದ್ದಾರೆ. 

"ಧೋನಿ ಪಡೆ ಅತ್ಯುತ್ತಮ ಆಟವನ್ನು ಆಡಿತು. ಲಾರ್ಡ್ಸ್‌ನಲ್ಲಿನ ವಿರೋಚಿತ ಗೆಲುವಿಗಾಗಿ ನಿಮಗೆ ನನ್ನ ಅಭಿನಂದನೆ. ನಮಗೆ ಬಹಳ ಸಂತೋಷವಾಗಿದೆ ಮತ್ತು ಈ ಉತ್ಕೃಷ್ಠ ಆಟದ ಬಗ್ಗೆ ನಮಗೆ ಗರ್ವವಿದೆ" ಎಂದು ಮೋದಿಯವರು ಟ್ವಿಟ್ ಮಾಡಿದ್ದಾರೆ.
 
ಕ್ರಿಕೆಟ್ ಕಾಶಿ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಭಾರತ 95 ರನ್‌ಗಳಿಂದ ಸೋಲಿಸಿದೆ. ತಕ್ಷಣ ಮೋದಿಯವರು ಈ ಟ್ವಿಟ್ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ