ನಾಳೆಯಿಂದ ಪೆಟ್ರೋಲ್, ಡೀಸೆಲ್ ಸರಬರಾಜು ವಾಹನಗಳು ಸ್ಥಗಿತ

ಮಂಗಳವಾರ, 4 ಏಪ್ರಿಲ್ 2017 (14:14 IST)
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನ ಮತ್ತಷ್ಟು ತೀವ್ರಗೊಳಿಸಲು ಲಾರಿ ಮಾಲೀಕರು  ನಿರ್ಧರಿಸಿದ್ದಾರೆ. ಏಪ್ರಿಲ್ 8ರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಲಾರಿ ಮಾಲೀಕರು ಘೋಷಿಸಿದ್ದಾರೆ.

ನಾಳೆಯಿಂದಲೇ ಪೆಟ್ರೋಲ್, ಡೀಸೆಲ್ ಸರಬರಾಜು ವಾಹನಗಳ ಸಂಚಾರ ಸ್ಥಗಿತಗೊಳಿಸುವುದಾಗಿ ಲಾರಿ ಮಾಲೀಕರು ಘೊಷಿಸಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಲಾರಿ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ 3 ದಿನ ಗಡುವು ನೀಡಿರುವ ಲಾರಿ ಮಾಲೀಕರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ 6 ದಿನಗಳಿಂದ 22 ಲಕ್ಷ ಲಾರಿಗಳು ಬಂದ್`ನಲ್ಲಿ ಪಾಲ್ಗೊಂಡಿದ್ದು, ಇನ್ನೂ 7 ಲಕ್ಷ ಲಾರಿಗಳು ಮುಷ್ಕರಕ್ಕೆ ಸಾಥ್ ನೀಡಲಿವೆ. ಲಾರಿಗಳ ವಿಮೆ ಕಂತು ಹೆಚ್ಚಳ, 15 ವರ್ಷಗಳ ಹಳೆಯ ವಾಹನಗಳ ನಿಷೇಧ, ಆರ್`ಟಿಓ ಶುಲ್ಕ ಹೆಚ್ಚಳ ಇವೇ ಮುಂತಾದ ಕೇಂದ್ರಗಳ ಕ್ರಮಗಳನ್ನ ವಿರೋಧಿಸಿ ಬಂದ್ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ