ಲವ್ ಜಿಹಾದ್: ಶೂಟಿಂಗ್ ಚಾಂಪಿಯನ್ ತಾರಾ ಸಹದೇವ್ ಪತಿ ಬಂಧನ

ಬುಧವಾರ, 27 ಆಗಸ್ಟ್ 2014 (08:23 IST)
ರೈಫಲ್ ಶೂಟಿಂಗ್ ರಾಷ್ಟ್ರೀಯ ಚಾಂಪಿಯನ್ ತಾರಾ ಸಹದೇವ್ ಪತಿ ರಂಜಿತ್ ಕುಮಾರ್ ಕೊಹ್ಲಿ ಅಲಿಯಾಸ್ ರಕಿಬುಲ್ ಹಸನ್‌  (30) ಜಾರ್‌ಖಂಡ್ ಮತ್ತು ದೆಹಲಿ ಪೋಲಿಸರು ನಡೆಸಿದ ಜಂಟಿ ಕಾರ್ಯಾಚರಣೆಯ ಬಲೆಗೆ ಬಿದ್ದಿದ್ದಾನೆ. ಕಳೆದ  ಮಂಗಳವಾರ ರಾತ್ರಿ  ದೆಹಲಿ- ಗಾಜಿಯಾಬಾದ್ ಗಡಿಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. 

ತಾನು ಹಿಂದೂ ಎಂದು ನಂಬಿಸಿ ಮದುವೆಯಾಗಿದ ಪತಿ ರಕಿಬುಲ್ ಹಸನ್‌, ತನ್ನನ್ನೀಗ ಇಸ್ಲಾಂಗೆ ಮತಾಂತರವಾಗುವಂತೆ ಚಿತ್ರ ಹಿಂಸೆ ನೀಡುತ್ತಿದ್ದಾನೆ ಎಂದು ರೈಫಲ್ ಶೂಟಿಂಗ್ ರಾಷ್ಟ್ರೀಯ ಚಾಂಪಿಯನ್ ತಾರಾ ಸಹದೇವ್ ಆಪಾದಿಸಿದ್ದರು.
 
ಕಳೆದ ಜುಲೈ ತಿಂಗಳಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅವರಿಬ್ಬರು ಮದುವೆಯಾಗಿದ್ದರು. ವೈಭವಯುತವಾಗಿ ನಡೆದಿದ್ದ ವಿವಾಹ ಮಹೋತ್ಸವದಲ್ಲಿ  ಹಲವಾರು ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ರಾಜಕಾರಣಿಗಳು ಭಾಗವಹಿಸಿದ್ದರು.
 
ಮದುವೆಯಾದ ರಾತ್ರಿ ತಾರಾಗೆ ಪತಿ ಮುಸ್ಲಿಂ ಎಂದು ಗೊತ್ತಾಗಿ  ಆಘಾತಗೊಂಡಿದ್ದಾಳೆ.ತಾರಾ ಪ್ರಕಾರ  ಅವರ ಪ್ರಥಮ ರಾತ್ರಿಯ ದಿನ  20-25 ಖಾಜಿಗಳನ್ನು  ಮನೆಗೆ ಕರೆದ ರಕಿಬುಲ್ ಆಕೆಯನ್ನು  ಮುಸ್ಲಿಂ  ಧರ್ಮಕ್ಕೆ ಮತಾಂತರಳಾಗುವಂತೆ ಬಲವಂತ ಮಾಡಿದ. ಆದರೆ ತಾರಾ ಅದನ್ನು ಬಲವಾಗಿ ಪ್ರತಿಭಟಿಸಿದಾಗ ಆಕೆಯನ್ನಾತ ದೈಹಿಕವಾಗಿ ಹಿಂಸಿಸಿದ. 
 
ನಂತರ ಆಕೆಯನ್ನು ತನ್ನ ಧರ್ಮಕ್ಕೆ ಪರಿವರ್ತಿತಳಾಗು ಎಂದು  ಹೊಡೆದು ಬಡಿದು ಹಿಂಸಿಸಿದ ಆತ ಆಕೆಯನ್ನು ಒಂದು ತಿಂಗಳ ಕಾಲ ಬಂಧಿಸಿಟ್ಟು ಆಕೆಯನ್ನು  ಉಪವಾಸ ಕೆಡವಿದ್ದಾನೆ. ಆಕೆಯ ದೇಹದ ಮೇಲೆ ಆತ ನೀಡಿದ ದೈಹಿಕ ಶೋಷಣೆಯಿಂದಾದ ಗಂಭೀರ ಗಾಯದ ಗುರುತು ಕೂಡ ಇದೆ. 
 
ಒಂದು ತಿಂಗಳುಗಳ ಕಾಲ ಹಿಂಸೆ ಅನುಭವಿಸಿದ  ತಾರಾ  ತಮ್ಮ ವ್ಯಥೆಯನ್ನು ಜಾರ್ಖಂಡ್ ಮಹಿಳಾ ಆಯೋಗದ ಮುಖ್ಯಸ್ಥೆ ಮಹುವಾ ಮಾಂಜಿ ಮತ್ತು ಮತ್ತು ಬಿಜೆಪಿ ನಾಯಕ ಅಜಯ್ ನಾಥ್  ಸಹದೇವ್ ಅವರಿಗೆ  ತಿಳಿಸುವ ನಿರ್ಧಾರ ಮಾಡಿದಳು.  ತಾನು ಮುಸ್ಲಿಂ ಧರ್ಮೀಯ ಎಂದು  ಬಹಿರಂಗ ಪಡಿಸದ ರಕಿಬುಲ್  ತಾನು ಹಿಂದು ಎಂಬಂತೆ ಬಿಂಬಿಸಿಕೊಂಡ ಎಂದು  ತಾರಾ ಆರೋಪಿಸಿದ್ದಾಳೆ. 
 
ಆತ ತನ್ನನ್ನು ಒಂದು ತಿಂಗಳುಗಳ ಕಾಲ ಬಂಧಸಿಟ್ಟುದ್ದಲ್ಲದೇ ಇಸ್ಲಾಂಗೆ ಪರಿವರ್ತಿತಳಾಗು ಎಂದು ಒತ್ತಡ ಹೇರುತ್ತಿದ್ದ, ನನ್ನ ಹೆಸರನ್ನು ಕೂಡ ಆತ ಸಾರಾ ಎಂದು ಬದಲಾಯಿಸಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಆಗಸ್ಟ್ 19ರಂದು ಆತ ದೆಹಲಿಗೆ ಹೋದ ಸಂದರ್ಭದಲ್ಲಿ ತನ್ನ ಕುಟುಂಬದವರನ್ನು ಸಂಪರ್ಕಿಸಿದ ಆಕೆಯನ್ನು ಆತನ ಸೆರೆಯಿಂದ ರಕ್ಷಿಸಲಾಯಿತು.
 
ತಾರಾ ಶೂಟಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದ ಸ್ಥಳಕ್ಕೆ ತನ್ನ ಮೂವರು ಸಹಚರರೊಂದಿಗೆ ನಿಯಮಿತವಾಗಿ ಬರುತ್ತಿದ್ದ ರಕಿಬುಲ್ ಪರಿಚಯ ಪ್ರೇಮಕ್ಕೆ ತಿರುಗಿ ತಾರಾ ಕಳೆದ ಜುಲೈ 7 ರಂದು  ಆತನನ್ನು ಮದುವೆಯಾಗಿದ್ದಳು.  

ವೆಬ್ದುನಿಯಾವನ್ನು ಓದಿ