ಪ್ರಿಯತಮೆಯನ್ನು ಕೊಂದು ಮತ್ತೊಂದು ಮದುವೆಯಾದ

ಸೋಮವಾರ, 8 ಫೆಬ್ರವರಿ 2016 (12:45 IST)
ಕಳೆದ ವಾರ ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ 21 ವರ್ಷದ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರನೇ ಆಕೆಯನ್ನು ಕೊಂದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 

ಮೃತ ಅರ್ಜು ಸಿಂಗ್ ಚೌಹಾನ್ ಶವ ದೆಹಲಿಯ ಮಾಡೆಲ್ ಟೌನ್‌ನಲ್ಲಿರುವ ಆರೋಪಿ ನವೀನ್ ಖತ್ರಿ (23)ಯ ನಿವಾಸದಲ್ಲಿ ಪತ್ತೆಯಾಗಿದೆ. 
 
ತನ್ನ ಪ್ರಿಯತಮೆ ಅರ್ಜುಳನ್ನು ಉಸಿರುಗಟ್ಟಿಸಿ ಕೊಂದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಫೆಬ್ರವರಿ 2 ರಂದು ಅರ್ಜುಳನ್ನು ಕೊಂದು ಆಕೆಯ ಶವವನ್ನು ಮನೆಯಲ್ಲಿಯೇ ಅಡಗಿಸಿಟ್ಟ ಆರೋಪಿ ಎರಡು ದಿನಗಳ ಬಳಿಕ ಮತ್ತೊಬ್ಬ ಹುಡುಗಿಯ ಜತೆ ವಿವಾಹವಾಗಿದ್ದ. 
 
ಮಗಳು ಮನೆಗೆ ಹಿಂತಿರುಗದಿದ್ದಾಗ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೊದಲಿನಿಂದಲೂ ಅರ್ಜು ಸಂಬಂದಿಕರು ನವೀನ್ ಮೇಲೆ ಶಂಕೆಯನ್ನು ವ್ಯಕ್ತಪಡಿಸಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿದ್ದಿದೆ.
 
ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ