ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ವಿಐಪಿ ಸಂಸ್ತ್ರತಿಯ ಪರವಾಗಿಲ್ಲ: ಬಿಜೆಪಿ

ಬುಧವಾರ, 1 ಜುಲೈ 2015 (14:54 IST)
ಏರಿಂಡಿಯಾ ವಿಮಾನದ ಹಾರಾಟಕ್ಕೆ ಒಂದು ಗಂಟೆ ಕಾಲ ತಡೆಯೊಡ್ಡಿದ್ದಾರೆ ಎನ್ನುವ ಆರೋಪಿಗಳನ್ನು ತಳ್ಳಿಹಾಕಿದ ಬಿಜೆಪಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಯಾವತ್ತೂ ವಿಐಪಿ ಸಂಸ್ಕ್ರತಿಗೆ ಆಸ್ಪದ ನೀಡದವರಲ್ಲ ಎಂದು ಹೇಳಿಕೆ ನೀಡಿದೆ. 
 
ಏರಿಂಡಿಯಾ ವಿಮಾನ ವಿಳಂಬದ ಕುರಿತಂತೆ ಸಿಎಂ ಫಡ್ನವೀಸ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಒಂದು ಚಿಕ್ಕ ಘಟನೆ ಯಾವುದೇ ಕಾರಣವಿಲ್ಲದೇ ವಿವಾದವಾಗಿ ಮಾರ್ಪಟ್ಟಿದೆ. ವಿಐಪಿ ಸಂಸ್ಕ್ರತಿಯನ್ನು ಅವರು ಸಹಿಸುವುದಿಲ್ಲ. ಅವರ ಮೇಲೆ ನಮಗೆ ನಂಬಿಕೆಯಿದೆ ಎಂದು ಬಿಜೆಪಿ ವಕ್ತಾರ ಗಿರೀಶ್ ವ್ಯಾಸ್ ತಿಳಿಸಿದ್ದಾರೆ. 
 
ವರದಿಗಳ ಪ್ರಕಾರ, ಸರಕಾರದ ಪ್ರಧಾನ ಕಾರ್ಯದರ್ಶಿಯಾದ ಅಧಿಕಾರಿ ಮುಖ್ಯಮಂತ್ರಿಗಳ ಹೊಸ ಪಾಸ್‌ಪೋರ್ಟ್ ಬದಲಿಗೆ ಹಳೆಯ ಪಾಸ್‌ಪೋರ್ಟ್ ತೆಗೆದುಕೊಂಡು ವಿಮಾನ ನಿಲ್ದಾಣ ಆಗಮಿಸಿದ್ದರು. ನಂತರ ಹೊಸ ಪಾಸ್‌ಪೋರ್ಟ್ ತರಲು ಫಡ್ನವೀಸ್ ನಿವಾಸಕ್ಕೆ ಮರಳಿ ಅಧಿಕಾರಿ ತೆರಳಿದ್ದರಿಂದ ವಿಮಾನ ಹಾರಾಟ ವಿಳಂಬಕ್ಕೆ ಕಾರಣವಾಯಿತು 
 
ಮುಂಬೈನಿಂದ ಅಮೆರಿಕದ ನ್ಯೂಯಾರ್ಕ್‌ಗೆ ತೆರಳುವ ವಿಮಾನದಲ್ಲಿ ಸುಮಾರು 250 ಪ್ರಯಾಣಿಕರಿದ್ದರು. ವಿಮಾನ ಹಾರಾಟ ಒಂದು ಗಂಟೆ ವಿಳಂಬವಾಗಿದ್ದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ