ಮಹಾ ಸರಕಾರ ರಚನೆ: ಶಿವಸೇನೆ, ಎನ್‌ಸಿಪಿಗೆ ಬಿಜೆಪಿ ಕೈಕೊಡುವ ಸಾಧ್ಯತೆ

ಮಂಗಳವಾರ, 21 ಅಕ್ಟೋಬರ್ 2014 (16:00 IST)
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷ ತಮ್ಮನ್ನು ಆಹ್ವಾನಿಸಲಿದೆ ಎಂದು ಶಿವಸೇನೆ ಮತ್ತು ಬಿಜೆಪಿ ಆತುರತೆಯಿಂದ ಕಾಯುತ್ತಿದ್ದರೆ, ಬಿಜೆಪಿ 12 ಪಕ್ಷೇತರರ ಬೆಂಬಲ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ವರದಿಯಾಗಿದೆ. 

ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ ತಮ್ಮ ಮಹಾರಾಷ್ಟ್ರ ಭೇಟಿಯನ್ನು ದೀಪಾವಳಿ ನಂತರಕ್ಕೆ ಮುಂದೂಡಿದ್ದಾರೆ ಎಂಬ ವರದಿಗಳು ಬಂದಿವೆ. ಈ ಇಬ್ಬರು ಬಿಜೆಪಿ ನಾಯಕರು ಸರ್ಕಾರ ರಚನೆಯ ಕುರಿತಂತೆ ಚರ್ಚಿಸಲು ಇಂದು ಮಹಾರಾಷ್ಟ್ರಕ್ಕೆ ಹೋಗಬೇಕಿತ್ತು.
 
ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ನಿರ್ಧರಿಸಲು, ಅನೇಕ ಮಹತ್ವದ ಅಂಶಗಳ ಕುರಿತು ಪಕ್ಷದ ನಾಯಕರು ಸೋಮವಾರ ಗಂಭೀರ ಸಮಾಲೋಚನೆಗಳನ್ನು ನಡೆಸಿದರು. 
 
ತನ್ನ ಪೂರ್ವ ಮಿತ್ರಪಕ್ಷ ಶಿವಸೇನೆಯನ್ನು ಒಪ್ಪಿಕೊಳ್ಳದಿರಲು ಬಿಜೆಪಿಗೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸೇನೆ ಪ್ರಧಾನಿ ಮೋದಿಯವರನ್ನು ಕಟುವಾಗಿ ಟೀಕಿಸಿತ್ತು. 
 
ಎನ್‌ಸಿಪಿ ಸಂಬಂಧಿಸಿದಂತೆ ಹೇಳುವುದಾದರೆ,  ಶರದ್ ಪವಾರ್ ನೇತೃತ್ವದ ಪಕ್ಷದೊಟ್ಟಿಗೆ ಸರಕಾರ ರಚಿಸಿಕೊಂಡು ಗೊತ್ತಿದ್ದು, ಗೊತ್ತಿದ್ದು ಅಪಾಯವನ್ನು ಮೈಮೇಲೆಳೆದುಕೊಳ್ಳಲು ಬಿಜೆಪಿ ತಯಾರಿಲ್ಲ . ಚುನಾವಣೆಯ ಸಮಯದಲ್ಲಿ, ಪ್ರಧಾನಿ ಮೋದಿ ಎನ್‌ಸಿಪಿಯನ್ನು "ಸ್ವಾಭಾವಿಕವಾಗಿ ಲಂಚಗುಳಿ ಪಾರ್ಟಿ" ಎಂದು ಟೀಕಿಸಿ, ಅವರನ್ನು ತಿರಸ್ಕರಿಸುವಂತೆ ಮತದಾರರನ್ನು ಒತ್ತಾಯಿಸಿದ್ದರು. 
 
ದೆಹಲಿ ಮತ್ತು ಜಮ್ಮು ಕಾಶ್ಮೀರದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಎನ್‌ಸಿಪಿ ಜತೆ ಕೈ ಮಿಲಾಯಿಸುವ ರಿಸ್ಕ್‌ನ್ನು ತೆಗೆದುಕೊಳ್ಳಲಾರದು ಎಂದು ಬಿಜೆಪಿ ಅನಾಮಧೇಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ