ಮಹಾರಾಷ್ಟ್ರ: ಬಿಜೆಪಿ-ಶಿವಸೇನೆ ಮೈತ್ರಿ ಸರಕಾರ ರಚನೆ ಸಾಧ್ಯತೆ

ಭಾನುವಾರ, 19 ಅಕ್ಟೋಬರ್ 2014 (12:22 IST)
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಂಗ್ರೆಸ್‌ಗೆ ಮುಖಭಂಗ, ಶಿವಸೇನೆಗೆ ಗರ್ವಭಂಗವಾಗಿದೆ.
 
288 ಸ್ಥಾನಗಳ ಪೈಕಿ ಬಿಜೆಪಿ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತ ಪಕ್ಷ ಕಾಂಗ್ರೆಸ್‌ ಹೀನಾಯವಾಗಿ ಸೋಲು ಕಂಡಿದೆ. ಕೇವಲ 45 ಸ್ಥಾನಗಳಲ್ಲಿ ಮಾತ್ರ ಪೈಪೋಟಿ ನೀಡುತ್ತಿದೆ.
 
ಸ್ಥಾನ ಹೊಂದಾಣಿಕೆ ವಿಷಯದಲ್ಲಿ ಬಿಜೆಪಿಯೊಂದಿಗೆ ಮುನಿಸಿಕೊಂಡು ಏಕಾಂಗಿಯಾಗಿ ಸ್ಪರ್ಧಿಸಿದ್ದ ಶಿವಸೇನೆಗೆ ಗರ್ವಭಂಗ ಉಂಟಾಗಿದೆ. 55 ಸ್ಥಾನಗಳಲ್ಲಿ ಮುನ್ನಡೆಯುತ್ತ ಸಾಗಿರುವ ಶಿವಸೇನೆಗೆ ಮಹಾರಾಷ್ಟ್ರದಲ್ಲಿ ಪ್ರಾಬಲ್ಯ ಕಡಿಮೆಯಾದಂತೆ ಕಾಣುತ್ತಿದೆ.
 
ಬಿಜೆಪಿಯ ಮೈತ್ರಿ ಪಕ್ಷಗಳು ಹಾಗೂ ಇತರರು 28 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ವೆಬ್ದುನಿಯಾವನ್ನು ಓದಿ