ಮೋದಿಯವರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಉದ್ಭವ್ ಠಾಕ್ರೆಗೆ ಆಹ್ವಾನ ನೀಡದ ಬಿಜೆಪಿ

ಶುಕ್ರವಾರ, 12 ಫೆಬ್ರವರಿ 2016 (15:21 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಮೇಕ್ ಇಂನ್ ಇಂಡಿಯಾ ಕಾರ್ಯಕ್ರಮಕ್ಕೆ ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆಯವರಿಗೆ ಆಹ್ವಾನ ನೀಡದಿರುವುದು ಮೈತ್ರಿ ಪಕ್ಷಗಳಲ್ಲಿ ಮತ್ತಷ್ಟು ಬಿಕ್ಕಟ್ಟಿಗೆ ಕಾರಣವಾಗಿದೆ.
 
ನಾಳೆ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿದ್ದು, ಆದರೆ, ಠಾಕ್ರಯವರಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಬಂದಿಲ್ಲ ಎಂದು ಶಿವಸೇನೆ ಹಿರಿಯ ನಾಯಕರು ತಿಳಿಸಿದ್ದಾರೆ.
 
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಎಂಎಂಆರ್‌ಡಿಎ ಕ್ರೀಡಾಂಗಣದಲ್ಲಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ನಡೆಯಲಿದ್ದು, ನಂತರ ವರ್ಲಿಯ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಮಹಾಲಕ್ಷ್ಮಿ ರೇಸ್‌ ಕೋರ್ಸ್‌ನ ಟರ್ಫ್‌ ಕ್ಲಬ್‌ನಲ್ಲಿ ರಾತ್ರಿ ಔತಣಕೂಟ ಏರ್ಪಡಿಸಲಾಗಿದೆ ಎಂದು ಬಿಜೆಪಿು ವಕ್ತಾರರು ತಿಳಿಸಿದ್ದಾರೆ.
 
ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸ್ವಾಧೀನ್ ಕ್ಷತ್ರೀಯ ಸೇರಿದಂತೆ ದೇಶ, ವಿದೇಶಗಳಿಂದ ಒಟ್ಟು 800 ಗಣ್ಯರನ್ನು ರಾತ್ರಿಯ ಔತಣಕೂಟಕ್ಕಾಗಿ ಆಹ್ವಾನಿಸಲಾಗಿದೆ
 
ಅತಿಥಿಗಳ ಪಟ್ಟಿಯಲ್ಲಿ ಹಲವು ದೇಶಗಳ ಪ್ರಧಾನಿಗಳು, ಉದ್ಯಮಿಗಳು, ಕೆಲ ಆಯ್ದ ರಾಜಕಾರಣಿಗಳು ಮತ್ತು ಉನ್ನತ ಸರಕಾರಿ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ.
 
ರಾತ್ರಿ ಔತಣಕೂಟಕ್ಕೆ ಉದ್ಭವ್ ಠಾಕ್ರೆಯವರ ಗೈರುಹಾಜರಿ ಕುರಿತಂತೆ ಸುದ್ದಿಗಾರರು ಪ್ರಶ್ನಿಸಿದಾಗ, ಅವರನ್ನು ಆಹ್ವಾನಿಸಲಾಗಿಲ್ಲ. ಹಿಂದೆ ಅಟಲ್‌ಜಿ ಪ್ರಧಾನಿಯಾಗಿದ್ದಾಗ ಬಾಳಾಸಾಹೇಬ್ ಠಾಕ್ರೆಯವರೊಂದಿಗೆ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಸಮಯ ಬದಲಾಗಿದೆ ಎಂದು ಹಿರಿಯ ಶಿವಸೇನೆ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ