ಆಮ್ಲೆಟ್‌ನಲ್ಲಿ ಟೊಮೆಟೋ ಹಾಕದಕ್ಕೆ ಗರ್ಭಿಣಿ ಪತ್ನಿಯನ್ನು ಥಳಿಸಿದ ಪತಿ

ಶುಕ್ರವಾರ, 21 ನವೆಂಬರ್ 2014 (14:55 IST)
ಟೊಮೆಟೊ ಬಳಸದೇ ಆಮ್ಲೆಟ್ ತಯಾರಿಸಿದ್ದಕ್ಕೆ ಪತಿ ಮಹಾಶಯನೊಬ್ಬ ಗರ್ಭಿಣಿ ಪತ್ನಿಯನ್ನು ಮನಬಂದಂತೆ ಥಳಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಬಂದ ವರದಿಯ ಪ್ರಕಾರ ತನ್ನ ಗಂಡ ಶಫೀಕ್  ಮತ್ತು ಅತ್ತೆ- ಮಾವಂದಿರು ವರದಕ್ಷಿಣೆ ಬೇಕೆಂದು ತುಂಬಾ ದಿನಗಳಿಂದ ತನ್ನನ್ನು ಪೀಡಿಸುತ್ತಿದ್ದಾರೆ ಎಂದು ಪೀಡಿತೆ ಫರ್ಜಾನಾ  ಮೋವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 
 
ಬುಧವಾರ ಸಂಜೆ ಕೆಲಸದಿಂದ ಮನೆಗೆ ಹಿಂತಿರುಗಿದ ಶಫೀಕ್ ತನ್ನ ಪತ್ನಿಯ ಬಳಿ ಆಮ್ಲೆಟ್ ಮಾಡುವಂತೆ ಕೇಳಿಕೊಂಡ. ಆಕೆ ಅದರಲ್ಲಿ ಟೊಮೆಟೋ ಹಾಕುವುದನ್ನು ಮರೆತಿದ್ದಾಳೆ. ಅದು ಆಕೆಯ ಗಂಡನನ್ನು ಕೆರಳಿಸಿದೆ. ಮಾತಿನಲ್ಲಿ ಪ್ರಾರಂಭವಾದ ಜಗಳ ತಾರಕಕ್ಕೇರಿ ಫರ್ಜಾನಾಳ ಗಂಡ ಆಕೆಯನ್ನು ಮನಬಂದಂತೆ ಥಳಿಸಿದ. 
 
ಘಟನೆಯ ಕುರಿತು ಆಕೆ ತನ್ನ ತಂದೆ-ತಾಯಿಗಳಿಗೆ ಮಾಹಿತಿ ನೀಡಿದ್ದಾಳೆ. ಕಾರ್ಗೋನ್ ಹಳ್ಳಿಯ ನಿವಾಸಿಗಳಾದ ಆಕೆಯ ತಂದೆ-ತಾಯಿಗಳು ತಕ್ಷಣ ಆಗಮಿಸಿ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
 
ಆಕೆಯ ಗಂಡ ಶಫೀಕ್ ಸೇರಿದಂತೆ, ಮೈದುನ ಸಬೀಕ್, ನಾದಿನಿ ಸಾಯ್ನಾ, ಅತ್ತೆ ಗುಲ್ತಾಜ್ ಮತ್ತು ಮಾವ ರಫೀಕ್ ವಿರುದ್ಧ ಐಪಿಸಿ ವಿಭಾಗ 498,323,294,506 ಮತ್ತು 34ರಡಿಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳೆಲ್ಲರೂ ತಲೆ ಮರೆಸಿಕೊಂಡಿದ್ದಾರೆ.  

ವೆಬ್ದುನಿಯಾವನ್ನು ಓದಿ