ಪ್ರಧಾನಿ ಮೋದಿ ವಿರುದ್ಧ ಅವಹೇಳನಾಕಾರಿ ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ ವಿರುದ್ಧ ದೂರು ದಾಖಲು

ಮಂಗಳವಾರ, 18 ಆಗಸ್ಟ್ 2015 (19:26 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಒಂದು ಸಮುದಾಯದ ವಿರುದ್ಧ ಅವಹೇಳನಾಕಾರಿ ವಿಡಿಯೋ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು 27 ವರ್ಷ ವಯಸ್ಸಿನ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
 
ಅಫಜಲ್‌ಗಢ್ ನಿವಾಸಿಯಾದ ಜಿಶಾನ್ ವಿರುದ್ಧ ಸಮಾಜದಲ್ಲಿ ಉದ್ರಿಕ್ತತೆ ಹರಡುವ ಉದ್ದೇಶದಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಸೆಕ್ಷನ್ 153 ಎ ಮತ್ತು 504 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಳೆದ ನಾಲ್ಕು-ಐದು ದಿನಗಳಿಂದ ಸಾವಿರಾರು ಜನರು ವಿಡಿಯೋ ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಆರೋಪಿ ಜಿಶಾನ್ ಕಳೆದ ನಾಲ್ಕು ವರ್ಷಗಳಿಂದ ಕುವೈತ್‌ನಲ್ಲಿದ್ದು 10 ತಿಂಗಳ ಹಿಂದೆ ವಿವಾಹಕ್ಕಾಗಿ ಭಾರತಕ್ಕೆ ಬಂದಿದ್ದ ಎನ್ನಲಾಗಿದೆ.
 
ವಿವಾಹದ ನಂತರ ಮತ್ತೆ ಕುವೈತ್‌ಗೆ ತೆರಳಿದ ಜಿಶಾನ್, ಸಮುದಾಯಗಳಲ್ಲಿ ಉದ್ರಿಕ್ತತೆಯನ್ನು ಸೃಷ್ಟಿಸುವ ಸಂಚು ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ