55 ಸಾವಿರ ರೂಪಾಯಿಗಳಲ್ಲಿ ಬಾಲಕಿಯನ್ನು ಖರೀದಿಸಿದ ಆರೋಪಿ

ಮಂಗಳವಾರ, 29 ಜುಲೈ 2014 (17:09 IST)
14 ವರ್ಷದ ಒಬ್ಬ ಹುಡುಗಿಯನ್ನು ಖರೀದಿಸಿ ಪತ್ನಿಯಂತೆ ಇಟ್ಟುಕೊಂಡ ಆರೋಪಿಯನ್ನು ಕೋಟಾ ಪೋಲಿಸರು ಬಂಧಿಸಿದ್ದಾರೆ. ಪೋಲಿಸರು ಆತನ ಮನೆಗೆ ಹೋದಾಗ ಆತ ಹುಡುಗಿಯೊಂದಿಗೆ ಪರಾರಿಯಾಗುವ ಸಿದ್ದತೆಯಲ್ಲಿದ್ದ. ಪೋಲಿಸರು ಬಂದ ಬಳಿಕೆ ಹುಡುಗಿ ಅಳತೊಡಗಿದಳು ಮತ್ತು ಸಂಪೂರ್ಣ ಕಥೆಯನ್ನು ಹೇಳಿದ್ದಾಳೆ. 
 
ಕೋಟಾ ತರಕಾರಿ ಮಳಿಗೆ ಠಾಣೆ ಕ್ಷೇತ್ರದಲ್ಲಿರುವ ರಾಜು ಕೆಲ ದಿನಗಳ ಹಿಂದೆ ತನ್ನ 14 ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಕಾಣೆಯಾದ  ಬಾಲಕಿಯ ತನಿಖೆ ನಡೆಸಿದ ಪೊಲೀಸರು ಕೋಟಾದಲ್ಲಿರುವ ಸರೋಜ್‌‌ ಮತ್ತು ರಫೀಕ್‌ ಎನ್ನುವ ಆರೋಪಿಗಳು‌‌ ಹುಡುಗಿಯನ್ನು ಮಧ್ಯ ಪ್ರದೇಶ್ ಮೂಲದ ಬಾಬುಲಾಲ್‌‌‌ಗೆ 55,00 ರೂಪಾಯಿಗಳಿಗೆ ಮಾರಾಟ ಮಾಡಿದ್ದರು ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ.
 
ಬಾಬುಲಾಲ್ ತನ್ನ ಪತ್ನಿಯೊಂದಿಗೆ ವಾಸಿಸುತ್ತಿರಲಿಲ್ಲ. ಆದ್ದರಿಂದ 14 ವರ್ಷದ ಹುಡುಗಿಯನ್ನು ಖರೀದಿ ಮಾಡಿ ತನ್ನ ಪತ್ನಿಯನ್ನಾಗಿ ಇರಿಸಿಕೊಂಡಿದ್ದನು. ಬಾಬುಲಾಲ್‌ ಪ್ರತಿದಿನ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಯಾರಿಗಾದರು ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದನು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. 
 
ಪೋಲಿಸರು ಆರೋಪಿಗಳಾದ ಸರೋಜ್‌ ಮತ್ತು ರಫಿಕ್‌‌ನನ್ನು ಬಂಧಿಸಿದ್ದಾರೆ. ಇವರು ನೀಡಿದ ಮಾಹಿತಿ ಮೇರೆಗೆ ಪೋಲಿಸರು ಬಾಬುಲಾಲ್‌‌‌‌ನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ