ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪತ್ನಿ: ರೆಡ್‌ ಹ್ಯಾಂಡಾಗಿ ಹಿಡಿದ ಪತಿ

ಶನಿವಾರ, 27 ಫೆಬ್ರವರಿ 2016 (20:36 IST)
ಪತ್ನಿ ಅಶ್ಲೀಲ ವೆಬ್‌ಸೈಟ್ ಮುಖಾಂತರ ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಕಂಡು ಆಘಾತಗೊಂಡ ಪತಿ ಮಹಾಶಯ,  ಸೈಬರ್ ಸೆಕ್ಸ್ ರಾಕೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ತಂಡವನ್ನು ಪತ್ತೆ ಹಚ್ಚುವಲ್ಲಿ ನೆರವಾಗಿದ್ದಾನೆ.  
 
ಎರಡು ಅಶ್ಲೀಲ ವಿಡಿಯೋಗಳಲ್ಲಿ ತನ್ನ ಪತ್ನಿ ಗ್ರಾಹಕರನ್ನು ಸೆಳೆಯುತ್ತಿರುವದು ಕಂಡ ಪತಿ, ಪತ್ನಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯನ್ನು ಭೇಟಿ ಮಾಡಿ ನನ್ನ ಪತ್ನಿ ಆನ್‌ಲೈನ್‌‌ನಲ್ಲಿ ಏನು ಮಾಡುತ್ತಿದ್ದಾಳೆ ಎಂದು ಪ್ರಶ್ನಿಸಿದ್ದಾನೆ. 
 
ಪತ್ನಿ ಮನೆಗೆಲಸದವಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಎನ್ನುವ ಭ್ರಮೆಯಲ್ಲಿದ್ದ ಪತಿಗೆ, ಪತ್ನಿಯ ವರ್ತನೆ ಕಂಡು ಆಘಾತವಾಗಿದೆ.
 
ಪತಿ ನೀಡಿದ ದೂರಿನ ಆದಾರದ ಮೇರೆಗೆ ದಾಳಿ ಮಾಡಿದ ಪೊಲೀಸರು ಮಾಹಿತಿ ನೀಡಿದಾತನ ಪತ್ನಿ ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡಿರುವುದು ಕಂಡು ಬಂದಿದೆ. ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದ ಮಹಿಳೆಯರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ