ರಾಜಸ್ಥಾನ: ನಿರಾಯಾಸವಾಗಿ ವಿಧಾನಸಭೆ ಪ್ರವೇಶಿಸಿದ 19 ಕ್ರಿಮಿನಲ್ ಪ್ರಕರಣಗಳ ಆರೋಪಿ

ಮಂಗಳವಾರ, 29 ಜುಲೈ 2014 (18:37 IST)
ಸಮಾಜ ವಿರೋಧಿ ಚಟುವಟಿಕೆಗಳ ಕಠಿಣ ನಿರ್ಬಂಧ ಕಾಯ್ದೆ ಅಥವಾ ಪಾಸಾ ಕಾಯಿದೆಯಡಿಯಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬ ರಾಜ್ಯ ವಿಧಾನಸಭೆಯಲ್ಲಿ ನಿರಾತಂಕವಾಗಿ, ಯಾವುದೇ ಅಡೆತಡೆ ಇಲ್ಲದೇ ಪ್ರವೇಶಿಸಿ ವಿರೋಧ ಪಕ್ಷದ ನಾಯಕ ರಾಮೇಶ್ವರ ಡುಡಿಯವರನ್ನು ಭೇಟಿಯಾಗಿದ್ದು ರಾಜಸ್ಥಾನದ ರಾಜಕೀಯ ವಲಯದಲ್ಲಿ ತೀವೃ ಖಂಡನೆಗೆ  ಕಾರಣವಾಗಿದೆ. 

ಲೂಟಿ ಮತ್ತು ಡಕಾಯಿತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 19 ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ರಾಮ್ ಚಂದ್ರ ಖಿಲೇರಿ ಎಂಬಾತ  ಜುಲೈ 25ರಂದು, ವಿಧಾನಸಭೆಗೆ ಬಂದು ನೋಕಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮೇಶ್ವರ ಡುಡಿಯವರನ್ನು ಭೇಟಿಯಾಗಿದ್ದಾನೆ. 
 
ಆಡಳಿತಾರೂಢ ಬಿಜೆಪಿ ಶಾಸಕರು ಇದನ್ನು ಭದ್ರತೆಯ ಗಂಭೀರ ಉಲ್ಲಂಘನೆ ಎಂದು ಆರೋಪಿಸಿದ್ದಾರೆ. 
.
ರಾಮಚಂದ್ರ, ಮತ್ತಿಬ್ಬರು  ವಿಧಾನಸಭಾ ಆವರಣದಲ್ಲಿ  ಡುಡಿ ಕಚೇರಿ ಹೊರಗೆ ನಿಂತಿರುವ ದ್ರಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬಿಜೆಪಿ ಶಾಸಕ ಮದನ್ ರಾಥೋಡ್ ಸಿಸಿಟಿವಿ ದೃಶ್ಯಾವಳಿಗಳ ದಾಖಲೆಯನ್ನು ಪಡೆದುಕೊಂಡಿದ್ದಾರೆ. 
 
ಭದ್ರತಾ ವಿಭಾಗದಲ್ಲಿ  ರಾಮಚಂದ್ರ ಅವರಿಗೆ ಸಂದರ್ಶಕ ಪಾಸ್ ನೀಡಲು ಅನುಮತಿಯನ್ನು ನಿರಾಕರಿಸಲಾಯಿತು. ಆದರೆ ಡುಡೆ ಆತ ವಿಧಾಸಭೆಯ ಆವರಣದೊಳಗೆ ಪ್ರವೇಶಿಸಲು ಸಹಾಯ ಮಾಡಿದರು ಎಂದು  ಬಿಜೆಪಿ ಶಾಸಕ ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ