ಪತ್ನಿಯನ್ನೇ ಗೆಳೆಯರೊಂದಿಗೆ ಮಲಗುವಂತೆ ಒತ್ತಾಯಿಸಿ ಬ್ಲೂಫಿಲ್ಮ್ ತೆಗೆದ ಪತಿ ಮಹಾಶಯ

ಮಂಗಳವಾರ, 4 ಆಗಸ್ಟ್ 2015 (17:30 IST)
ಪತಿಯ ಗೆಳಯರು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದಾರೆ ಎಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ.
 
ರಾಜೇಶ್ ಶರ್ಮಾ ಎಂಬಾತನನ್ನು ವಿವಾಹವಾದ ಮೆಹಮೂದ್‌ಪುರ್ ನಿವಾಸಿಯಾದ ಮಹಿಳೆ ಪೊಲೀಸರಿಗೆ ದೂರು ನೀಡಿ, ಪತಿಯ ಗೆಳೆಯರು ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರವೆಸಗಿದ್ದಾರೆ ಎಂದು ದೂರಿದ್ದಾಳೆ.
 
ಪತಿ ಮಹಾಶಯ ತನ್ನ ಪತ್ನಿಯ ಮೇಲೆ ಗೆಳೆಯರು ಅತ್ಯಾಚಾರವೆಸಗುತ್ತಿದ್ದ ದೃಶ್ಯಗಳ ವಿಡಿಯೋ ಮಾಡಿಕೊಂಡು ನಂತರ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ ಗುರುವಾರದಂದು ಪತಿ ರಾಜೇಶ್ ಶರ್ಮಾ ಮತ್ತು ಆತನ ಗೆಳೆಯರ ಕಪಿಮುಷ್ಠಿಯಿಂದ ಪಾರಾದ ಮಹಿಳೆ, ಕಂಕರ್‌ಖೇಡಾದಲ್ಲಿರುವ ತನ್ನ ಚಿಕ್ಕಮ್ಮಳ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ.  
 
ಮಾರನೇ ದಿನ ಪೊಲೀಸ್ ಠಾಣೆಗೆ ತೆರಳಿ ಪತಿ ಮತ್ತು ಆತನ ಗೆಳೆಯರ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.
 
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತಿ ರಾಜೇಶ್ ಶರ್ಮಾನನ್ನು ಬಂಧಿಸಿದ್ದಾರೆ. ಆದರೆ, ಆತನ ಗೆಳಯರು ಪರಾರಿಯಾಗಿದ್ದು ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ