ನ್ಯೂಡಲ್ಸ್ ಆಮಿಷ ತೋರಿಸಿ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ

ಮಂಗಳವಾರ, 31 ಮಾರ್ಚ್ 2015 (17:15 IST)
6 ವರ್ಷದ ಪುಟ್ಟ ಬಾಲೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಗುರ್‌ಗಾಂವ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. 

ಭಾನುವಾರ ರಾತ್ರಿ 8.30 ರ ಸುಮಾರಿಗೆ ಘಟನೆ ನಡೆದಿದ್ದು , ತನ್ನ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಆರೋಪಿ ಶರ್ಮಾ ಯಾದವ್ ನ್ಯೂಡಲ್ಸ್ ಮತ್ತು ಚಾಕಲೇಟು ಕೊಡಿಸುವ ನೆಪದಿಂದ ಕರೆದುಕೊಂಡು ಹೋಗಿದ್ದು, ಮಗುವಿನ ಮೇಲೆ ಆರೋಪಿ ಸತತ ಎರಡು ಗಂಟೆಗಳ ಕಾಲ ದುಷ್ಕೃತ್ಯ ನಡೆಸಿದ್ದಾನೆ ಎಂದು ಚಕ್ಕಾರ್‌ಪುರ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. 
 
ಮಗು ತಡರಾತ್ರಿಯಾದರೂ ಕಾಣದಾದಾಗ ಹುಡುಕುತ್ತಾ ಹೋದ ಪರಿವಾರದವರಿಗೆ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಗುರಗಾಂವ್‌ನ ಸಹಾಯಕ ಪೊಲೀಸ್ (ಅಪರಾಧ)  ಆಯುಕ್ತ ರಾಜೇಶ್ ಕುಮಾರ್ ತಿಳಿಸಿದ್ದಾರೆ. 
 
ದಿನಗೂಲಿ ಕಾರ್ಮಿಕನಾಗಿರುವ ಆರೋಪಿ ಯಾದವ್ ಬಹದುರ್‌ಗರ್‌ನಿಂದ ಗುರಗಾಂವ್‌ಗೆ ಆಗಮಿಸಿದ್ದ ಎಂದು ತಿಳಿದು ಬಂದಿದ್ದು, ಆತನನ್ನು ಚಕ್ಕಾರ್‌ಪುರ್‌ದಲ್ಲಿರುವ ಆತನ ಸಂಬಂಧಿಗಳ ಮನೆಯಿಂದ ಬಂಧಿಸಲಾಗಿದೆ. 

ವೆಬ್ದುನಿಯಾವನ್ನು ಓದಿ