ಮೆಟ್ರೋರೈಲಿನಲ್ಲಿಯೇ ಮೂತ್ರ ಮಾಡಿದ ಪ್ರಯಾಣಿಕ

ಬುಧವಾರ, 24 ಜೂನ್ 2015 (20:32 IST)
ಮೆಟ್ರೋ ರೈಲ್ವೆಯ ಬೋಗಿಯಲ್ಲಿಯೇ ಮೂತ್ರ ಮಾಡಿದ ವ್ಯಕ್ತಿಯೊಬ್ಬ ನಾಚಿಕೆಗೇಡಿತನದ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಕೆಲ ದಿನಗಳ ಹಿಂದೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ರೈಲಿನಲ್ಲಿಯೇ ಮೂತ್ರ ಮಾಡುತ್ತಿದ್ದ ದೃಶ್ಯಗಳನ್ನು ಸಹಪ್ರಯಾಣಿಕರು ಸೆರೆಹಿಡಿದು ಇಂಟರ್‌ನೆಟ್‌ನಲ್ಲಿ ಹಾಕಿದ್ದಾರೆ.
 
ರೈಲಿನಲ್ಲಿಯೇ ಮೂತ್ರ ಮಾಡುತ್ತಿದ್ದ ವ್ಯಕ್ತಿಯನ್ನು ಸಹಪ್ರಯಾಣಿಕರು ತರಾಟೆಗೆ ತೆಗೆದುಕೊಂಡರೂ ಸಹ ಆತ ಕ್ಯಾರೆ ಎನ್ನಲಿಲ್ಲ ಎಂದು ಮೂಲಗಳು ತಿಳಿಸಿವೆ.
 
ನಾಚಿಕೆಯಿಲ್ಲದೇ ವ್ಯಕ್ತಿ ರೈಲಿನ ಬೋಗಿಯಲ್ಲಿಯೇ ಕೋಲ್ಡ್‌ಡ್ರಿಂಕ್ಸ್ ಬಾಟಲಿಯಲ್ಲಿ ಮೂತ್ರ ಮಾಡಿದ್ದಾನೆ. ಸಹಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದಾಗ, ಇದು ಕೊನೆಯ ರೈಲು ನಾನು ಇದನ್ನು ಮಿಸ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮಾರುತ್ತರ ನೀಡಿದ್ದಾನೆ ಎಂದು ಸಹಪ್ರಯಾಣಿಕ ಮೂಲಗಳು ತಿಳಿಸಿವೆ.  
 
 

ವೆಬ್ದುನಿಯಾವನ್ನು ಓದಿ