ವಿದ್ಯುತ್ ಕಡಿತ: ಮೇಣದಬತ್ತಿ ಬೆಳಕಲ್ಲಿ ಊಟ ಮಾಡಲು ನಿರಾಕರಿಸಿದ ಪತಿಗೆ ವಿಚ್ಚೇದನ ನೀಡಿದ ಪತ್ನಿ

ಶನಿವಾರ, 18 ಏಪ್ರಿಲ್ 2015 (15:50 IST)
ನಿರಂತರ ವಿದ್ಯುತ್ ಕಣ್ಣುಮುಚ್ಚಾಲೆಯಾಟ ಉತ್ತರಪ್ರದೇಶದ ಜನತೆಗೆ ಜೀವನವೇ ಬೇಸರ ತರಿಸಿದೆ. ಇದೀಗ ವಿದ್ಯುತ್ ಕಣ್ಣುಮುಚ್ಚಾಲೆಯಾಟ ಪ್ರತಾಪ್‌ಗಢ್ ಜಿಲ್ಲೆಯ ನಿವಾಸಿಗಳಾಗಿದ್ದ ದಂಪತಿಗಳ ವಿಚ್ಚೇದನಕ್ಕೆ ಕಾರಣವಾಗಿದೆ.

ವಿದ್ಯುತ್ ತೊಂದರೆಯ ಮಧ್ಯೆ ಪ್ರತಿನಿತ್ಯ ಮೇಣದ ಬತ್ತಿಯ ಬೆಳಕಿನಲ್ಲಿ ಊಟ ಮಾಡಲು ನಿರಾಕರಿಸುತ್ತಿದ್ದ ಪತಿಯ ವರ್ತನೆಯಿಂದ ಬೇಸತ್ತ ಪತ್ನಿ, ಏಳು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾಳೆ.

ಕರೆಂಟ್ ಬಂದ ಮೇಲೆ ಊಟ ಬಡಿಸುವಂತೆ ಅಲ್ಲಿಯವರೆಗೆ ಮಲಗಬೇಡ ಎಚ್ಚರವಾಗಿರು ಎಂದು ಹೇಳುತ್ತಿದ್ದ. ನಾನು ಏನನ್ನಾದರೂ ಹೇಳಿದಲ್ಲಿ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಎಂದು ಪತ್ನಿ ರುಕ್ಸಾನಾ ಅಲಿಯಾಸ್ ಬಬ್ಲಿ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇದನ್ನು ಹೊರತುಪಡಿಸಿದಲ್ಲಿ ಪತಿ ಖಾದಿರ್, ಅತ್ಯುತ್ತಮ ಪತಿ ಮತ್ತು ಮಗುವಿಗೆ ಒಳ್ಳೆ ತಂದೆಯಾಗಿದ್ದಾನೆ ಎಂದು ನೆರೆಹೊರೆಯವರು ಹೇಳಿಕೆ ನೀಡಿದ್ದಾರೆ.

ದಂಪತಿಗಳಿಗೆ ಕುಟುಂಬದ ಹಿರಿಯರು ಬುದ್ದಿಹೇಳುವ ಪ್ರಯತ್ನ ಮಾಡಿದರಾದರೂ ಅವರನ್ನು ಒಂದಾಗಿಸಲು ಸಾಧ್ಯವಾಗಲಿಲ್ಲ. ರುಕ್ಸಾನಾ ತನ್ನ ಪತಿಯನ್ನು ತೊರೆದು ತವರುಮನೆಗೆ ತೆರಳಿದ್ದಾಳೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ