ದೆಹಲಿ ವಿವಿ ವಿದ್ಯಾರ್ಥಿನಿ ಅಪಹರಿಸಿ ರೇಪ್ ಎಸಗಿದ ಉದ್ಯಮಿಗೆ ಏಳು ವರ್ಷ ಜೈಲು ಶಿಕ್ಷೆ

ಸೋಮವಾರ, 1 ಫೆಬ್ರವರಿ 2016 (22:00 IST)
ಕಳೆದ 2010ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಆವರಣದಿಂದ ವಿದ್ಯಾರ್ಥಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ 58 ವರ್ಷ ವಯಸ್ಸಿನ ಉದ್ಯಮಿಗೆ ನ್ಯಾಯಾಲಯ ಏಳು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.
 
ಹೆಚ್ಚುವರಿ ನ್ಯಾಯಮೂರ್ತಿ ಪವನ್ ಕುಮಾರ್ ಮಟ್ಟೋ, ಇಬ್ಬರು ಪುತ್ರಿಯರ ತಂದೆಯಾದ ಆರೋಪಿ ಮುಕೇಶ್ ಸಿಂಘಾಲ್‌ 17 ವರ್ಷ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
 
ಆರೋಪಿ ವಿದ್ಯಾರ್ಥಿನಿಯನ್ನು ಅಪಹರಿಸಿರುವುದು ಅತ್ಯಾಚಾರವೆಸಗಿರುವುದು ಮತ್ತು ಜೀವ ಬೆದರಿಕೆ ಹಾಕಿರುವ ಆರೋಪಗಳು ಸಾಬೀತಾಗಿವೆ ಎಂದು ತಿಳಿಸಿದ್ದಾರೆ.
 
ಆರೋಪಿ ಮುಕೇಶ್ ಸಿಂಘಾಲ್‌ಗೆ 9 ಸಾವಿರ ರೂಪಾಯಿಗಳ ದಂಡವನ್ನು ಕೋರ್ಟ್ ವಿಧಿಸಿದೆ.
 
ಆದರೆ, ಆರೋಪಿ ಪರ ವಕೀಲರು ವಿದ್ಯಾರ್ಥಿನಿ ಹಣ ನೀಡದಿದ್ದಲ್ಲಿ ರೇಪ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಳು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಆದರೆ, ಆರೋಪಿ ಪರ ವಕೀಲರ ವಾದವನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದರು.

ವೆಬ್ದುನಿಯಾವನ್ನು ಓದಿ