ಟ್ರಾಯ್ ಮಾಜಿ ಅಧ್ಯಕ್ಷನಿಗೆ ಬೆದರಿಕೆ ಒಡ್ಡಿದ್ದರಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಮಂಗಳವಾರ, 26 ಮೇ 2015 (16:14 IST)
ಮೊದಲೇ ಚುನಾವಣಾ ಸೋಲು, ಹಗರಣಗಳ ಬಯಲು ಇವೇ ಮುಂತಾದ ಸಮಸ್ಯೆಗಳಿಂದ ನಲುಗಿರುವ ಕಾಂಗ್ರೆಸ್‌ಗೆ ಮತ್ತೊಂದು ಮುಜುಗರ, ಇರಿಸು ಮುರಿಸು ಎದುರಾಗಿದೆ. 2 ಜಿ ಪ್ರಕರಣದಲ್ಲಿ ಸಹಕರಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬೆದರಿಕೆ ಒಡ್ಡಿದ್ದರು ಎಂದು ಭಾರತ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರದೀಪ್  ಬಾಲಾಜಿ ಆರೋಪಿಸಿದ್ದಾರೆ.

"ತನ್ನ ವಿರುದ್ಧ ಅಂಟಿದ್ದ ಭ್ರಷ್ಟಾಚಾರದ ಆರೋಪವನ್ನು ಅಳಿಸಿ ಹಾಕುವ ಪ್ರಯತ್ನವಾಗಿ ಹಿಂದಿನ ಯುಪಿಎ ಸರಕಾರ ನನ್ನ ಹೆಸರನ್ನು ಹಾಳುಗೆಡವಿತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸೇರಿದಂತೆ ಯುಪಿಎ ಸರಕಾರದ ಅನೇಕ ಜನರು ನನಗೆ ಎಚ್ಚರಿಕೆ ನೀಡಿದ್ದರು. ಆದ್ದರಿಂದ ನಾನು ಅಂದಿನ ಸರಕಾರದ ಮಂತ್ರಿಗಳು ಮತ್ತು ಸಚಿವಾಲಯದ ಕ್ರಮಗಳಿಗೆ ನಾನು ಅನುಮೋದನೆ ನೀಡಿದೆ", ಎಂದು ಅವರು ತಾವು ಬರೆದ ಪುಸ್ತಕವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. 
 
"ನಿಮ್ಮ ಸೂಚನೆಗಳನ್ನು ಅನುಸರಿಸುವುದು ಬಹುದೊಡ್ಡ ಅಪಾಯವನ್ನು ತಂದಿಡಲಿದೆ ಮತ್ತು ಮತ್ತು ಅತಿ ದೊಡ್ಡ ಹಗರಣ ಕಾರಣವಾಗಬಹುದು ಎಂದು ನಾನು ಹೇಳಿದ್ದೆ. ನಾನೆಣಿಸಿದಂತೆ ಆಯಿತು", ಎಂದು ಪ್ರದೀಪ್ ತಿಳಿಸಿದ್ದಾರೆ.  
 
"ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿತ್ತು. ನಾನು ಪುಸ್ತಕದಲ್ಲಿ ವಿವರಿಸಿದ ಎಲ್ಲ ಸಂಗತಿಗಳು ಸಹ ಸತ್ಯ. ನಾನು ಟೆಲಿಕಾಂ ಸಚಿವರ ಸೂಚನೆಗಳನ್ನು ಅನುಸರಿಸಬೇಕು ಎಂದು ಮಾಜಿ ಪ್ರಧಾನಿ ಸಿಂಗ್ ತಿಳಿಸಿದ್ದರು. ಹಾಗೆ ಮಾಡುವುದು ಬಹುದೊಡ್ಡ ಅನಾಹುತಕ್ಕೆ ದಾರಿ ಮಾಡಿ ಕೊಟ್ಟಂತೆ  ಎಂದು ನಾನು ಅವರಿಗೆ ವಿವರಿಸಿದ್ದೆ. ನಾನೆಣಿಸಿದಂತೆ ಅದು ದೊಡ್ಡ ಹಗರಣವಾಗಿ ಬೆಳಕಿಗೆ ಬಂತು", ಬಾಲಾಜಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ