ಯೋಧರು ದೇಶಕ್ಕಾಗಿ ಮಾಡುವ ತ್ಯಾಗ, ಬಲಿದಾನಗಳನ್ನು ಮನಸಾರೆ ಕೊಂಡಾಡಿದ ಅವರು, ಯೋಧರು ಸದಾ ನಮ್ಮನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿರುತ್ತಾರೆ. ಅವರಿಂದಾಗಿ ನಾವು ದೀಪಾವಳಿಯನ್ನು ನಿರಾತಂಕವಾಗಿ ಆಚರಿಸಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ನಮ್ಮ ಯೋಧರಿಗೆ ಧನ್ಯವಾದಗಳನ್ನು ಹೇಳಲೇ ಬೇಕು ಎಂದಿದ್ದಾರೆ.
ಪಟಾಕಿಯಿಂದ ಸಂಭವಿಸುವ ಅನಾಹುತಗಳಿಗೆ ಕಳವಳ ವ್ಯಕ್ತ ಪಡಿಸಿದ ಅವರು, ಪಟಾಕಿಯಿಂದ ಸಂಭವಿಸುವ ಅವಘಡ ಮಕ್ಕಳ ಭವಿಷ್ಯಕ್ಕೆ ಅಂಧಕಾರ ತರಬಹುದು, ಪೋಷಕರು ಎಚ್ಚರದಿಂದಿರಬೇಕು ಎಂದರು.