ಆಪ್ ಮುಖಂಡನ ನಿವಾಸಕ್ಕೆ ಭೇಟಿ ನೀಡಿದ ಮನೋಹರ್ ಪರಿಕ್ಕರ್

ಮಂಗಳವಾರ, 12 ಜುಲೈ 2016 (18:24 IST)
ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಇಂದು ಆಮ್ ಆದ್ಮಿ ಪಕ್ಷಧ ಸಹ ಸಂಚಾಲಕ ವಾಲ್ಮಿಕಿ ನಾಯಕ್‌ ನಿವಾಸಕ್ಕೆ ಭೇಟಿ ಮಾಡಿ ರಹಸ್ಯ ಮೈತ್ರಿಗೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
 
ವಾಲ್ಮಿಕಿ ನಾಯಕ್ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರನ್ನು ಕಾಣಲು ಪರಿಕ್ಕರ್ ಬಂದಿದ್ದರು ಎನ್ನವುದು ಸತ್ಯಕ್ಕೆ ದೂರವಾದ ಸಂಗತಿ. ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಮಧ್ಯೆ ಚುನಾವಣೆ ರಹಸ್ಯ ಒಪ್ಪಂದಕ್ಕಾಗಿ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಟ್ರಾಜಾನೋ ಡಿಮೆಲ್ಲೋ ತಿಳಿಸಿದ್ದಾರೆ.
 
ಕಳೆದ 1980 ಮತ್ತು 90 ರ ದಶಕದಲ್ಲಿ ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದತ್ತಾ ನಾಯಕ್ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ  ಖ್ಯಾತ ಉದ್ಯಮಿಯೊಂದಿಗೆ ಪರಿಕ್ಕರ್ ಅವರ ನಿವಾಸಕ್ಕೆ ಆಗಮಿಸಿದ್ದರು.   
 
ರಾಜಕೀಯ ಮತ್ತು ಸಿದ್ಧಾಂತಗಳ ಭಿನ್ನಾಭಿಪ್ರಾಯಗಳ ಮಧ್ಯೆಯೂ ಪರಿಕ್ಕರ್ ನಮ್ಮ ಮನೆಗೆ ಭೇಟಿ ನೀಡುವುದನ್ನು ಮುಂದುವರಿಸಲಿ. ನಾವು ಅವರನ್ನು ಎಂದಿನಂತೆ ಸ್ವಾಗತಿಸುತ್ತೇವೆ ಎಂದು ಆಪ್ ನಾಯಕ ವಾಲ್ಮಿಕಿ ನಾಯಕ್ ತಿಳಿಸಿದ್ದಾರೆ.
 
ಮನೋಹರ್ ಪರಿಕ್ಕರ್ ಅವರ ಮನೋವೈಶ್ಯಾಲತೆಯ ಬಗ್ಗೆ ಪ್ರಧಾನಿ ಮೋದಿ ಸರಕಾರ ಪಾಠ ಕಲಿಯಬೇಕಾಗಿದೆ. ದೆಹಲಿಯಲ್ಲಿರುವ ಆಮ್ ಆ್ರದ್ಮಿ ಸರಕಾರಕ್ಕೆ ಮೋದಿ ಸರಕಾರ ಬೆಂಬಲ ನೀಡಲಿ ಎಂದು ವಾಲ್ಮಿಕಿ ನಾಯಕ್ ಕೋರಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ