ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್: ಆಪ್ತ ಕಾರ್ಯದರ್ಶಿ ಬಂಧನಕ್ಕೆ ಮಾರನ್ ಟೀಕೆ

ಗುರುವಾರ, 22 ಜನವರಿ 2015 (10:03 IST)
ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್ ಸ್ಥಾಪನೆಗೆ ಸಂಬಂಧಿಸಿದಂತೆ ತಮ್ಮ ಆಪ್ತ ಕಾರ್ಯದರ್ಶಿ ಬಂಧನವನ್ನು ದಯಾನಿಧಿ ಮಾರನ್ ಟೀಕಿಸಿದ್ದಾರೆ. ತಮಿಳುನಾಡಿನ ಆರ್‌ಎಸ್‌ಎಸ್ ಮುಖಂಡರನ್ನು ತೃಪ್ತಿಪಡಿಸಲು ಬಂಧಿಸಲಾಗಿದೆ ಎಂದು ದಯಾನಿಧಿ ಮಾರನ್ ಆರೋಪಿಸಿದ್ದಾರೆ.

ಬಂಧಿತರಿಗೆ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಲಾಗಿದೆ. ಈ ಬಗ್ಗೆ ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ. ನನ್ನ ವಿರುದ್ಧ ಹೇಳಿಕೆ ನೀಡುವಂತೆ ಹಿಂಸಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
 
ಸಿಬಿಐ ಬುಧವಾರ ರಾತ್ರಿ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರ ಆಪ್ತ ಕಾರ್ಯದರ್ಶಿ ಸೇರಿದಂತೆ ಮೂವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ನವದೆಹಲಿಯಿಂದ ಬಂದಿದ್ದ ಸಿಬಿಐ ವಿಶೇಷ ಕಾರ್ಯಪಡೆಯ ತಂಡ ಮಾರನ್ ಮಾಜಿ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಕಣ್ಣನ್ ಮತ್ತು ಮೂವರನ್ನು ಬಂಧಿಸಿತ್ತು. ಅವರನ್ನು ನಗರ ಕೋರ್ಟ್‌ಗೆ ಹಾಜರುಪಡಿಸಿ ತನಿಖೆಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮಾರನ್ ಮನೆಯಲ್ಲಿ ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್ ಸ್ಥಾಪಿಸುವ ಮೂಲಕ ಡೇಟಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿತ್ತೆಂದು ಆರೋಪಿಸಲಾಗಿದೆ. ಈ ಉದ್ದೇಶಕ್ಕಾಗಿ ಅಧಿಕ ವೇಗದ ಟೆಲಿಫೋನ್ ಮಾರ್ಗಗಳನ್ನು ಮಂಜೂರು ಮಾಡಿದ ಬಿಎಸ್ಎನ್‌ಎಲ್ ಅಧಿಕಾರಿಗಳು ಮತ್ತು ಮಾರನ್ ವಿರುದ್ಧ ಕೇಸು ದಾಖಲಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ