ಚಾಕುವಿನಿಂದ ಬೆದರಿಸಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ

ಬುಧವಾರ, 24 ಸೆಪ್ಟಂಬರ್ 2014 (15:16 IST)
ವಿವಾಹಿತ ಮಹಿಳೆಗೆ ನೆರೆಮನೆಯ ವ್ಯಕ್ತಿಯೊಬ್ಬ ಚಾಕುವಿನಿಂದ ಬೆದರಿಸಿ ಅತ್ಯಾಚಾರವೆಸಗಿದ ಘಟನೆ ವೀಲಾ ತೇಜಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಚಾಲಕನಾಗಿರುವ ಮಹಿಳೆಯ ಪತಿ ಮನೆಯಿಂದ ಹೊರಗಡೆ ಹೋಗಿದ್ದಾಗ ಆರೋಪಿ ಹರ್‌ಪ್ರೀತ್ ಸಿಂಗ್ ಮನೆಯನ್ನು ಒತ್ತಾಯಪೂರ್ವಕವಾಗಿ ಪ್ರವೇಶಿಸಿ, ಚಾಕುವಿನಿಂದ ಮಹಿಳೆಯನ್ನು ಬೆದರಿಸಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎಂದು ಫತೇಹಗರ್ ಚುರಿಯಾನ್ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಕಕ್ಕರ್ ತಿಳಿಸಿದ್ದಾರೆ. 
 
ಒಂದು ವೇಳೆ ಅತ್ಯಾಚಾರವೆಸಗಿರುವ ಬಗ್ಗೆ ಬಹಿರಂಗಪಡಿಸಿದಲ್ಲಿ ಮಹಿಳೆಯ ಇಬ್ಬರು ಮಕ್ಕಳನ್ನು ಹತ್ಯೆ ಮಾಡುವುದಾಗಿ ಆರೋಪಿ ಬೆದರಿಕೆಯೊಡ್ಡಿದ್ದ 
 
ಆರೋಪಿ ಹರ್‌ಪ್ರೀತ್ ಸಿಂಗ್ ವಿರುದ್ಧ ಅತ್ಯಾಚಾರ ಮತ್ತು ಜೀವ ಬೆದರಿಕೆಯೊಡ್ಡಿದ ಪ್ರಕರಣ ದಾಖಲಿಸಲಾಗಿದ್ದು, ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
 
 

ವೆಬ್ದುನಿಯಾವನ್ನು ಓದಿ