ಸಿಎಂ ಯೋಗಿ ಹೋದ ಮೇಲೆ ಯೋಧನ ಮನೆಯಿಂದ ಸೋಫಾವೂ ಹೋಯ್ತು!

ಸೋಮವಾರ, 15 ಮೇ 2017 (09:30 IST)
ಲಕ್ನೋ: ನಮ್ಮ ದೇಶದಲ್ಲಿ ಇದು ಹೊಸದಲ್ಲ. ವಿಐಪಿಗಳು ಬರುವಾಗ ಅವರ ಕಣ್ಣಿಗೆ ಮಣ್ಣೆರಚಲು ಅಧಿಕಾರಿಗಳು ರಸ್ತೆ ರಿಪೇರಿ ಮಾಡಿಸುವುದು, ಗುಡಿಸಲನ್ನು ಅರಮನೆಯಾಗಿ ಮಾಡುವುದೆಲ್ಲಾ ಮಾಮೂಲಿ. ಅಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 
ಸಿಎಂ ಯೋಗಿ ಆದಿತ್ಯನಾಥ್ ಪಾಕ್ ಯೋಧರಿಂದ ಶಿರಚ್ಛೇದಕ್ಕೊಳಗಾದ ಹುತಾತ್ಮ ಯೋಧ ಪ್ರೇಮ್ ಸಾಗರ್ ಮನೆಗೆ ಭೇಟಿ ನೀಡುವವರಿದ್ದರು. ಅವರು ಬರುವ ಸುದ್ದಿ ತಿಳಿದ ಅಧಿಕಾರಿಗಳು ಯೋಧನ ಮನೆಗೆ ಸೋಫಾ, ಎಸಿ ವ್ಯವಸ್ಥೆ, ಟವೆಲ್, ಫ್ಯಾನ್ ಎಲ್ಲಾ ವ್ಯವಸ್ಥೆ ಮಾಡಿದ್ದರು.

ಸಿಎಂ ಹತ್ತು ನಿಮಿಷ ಕುಟುಂಬದವರೊಂದಿಗೆ ಕಳೆದು ಮರಳಿದ ಮೇಲೆ ಅಧಿಕಾರಿಗಳು ತಾವು ಫಿಟ್ ಮಾಡಿದ್ದ ವಸ್ತುಗಳನ್ನೆಲ್ಲಾ ಹೊತ್ತೊಯ್ದರು. ಈ ರೀತಿ ದೇಶಕ್ಕಾಗಿ ಪ್ರಾಣ ತೆತ್ತ ಯೋಧನ ಕುಟುಂಬಕ್ಕೆ ಅಕ್ಷರಶಃ ಅವಮಾನ ಮಾಡಲಾಗಿದೆ.

ಹುತಾತ್ಮ ಯೋಧನ ಶವ ಸಂಸ್ಕಾರಕ್ಕೆ ಮುಖ್ಯಮಂತ್ರಿಗಳು ಬರಲೇಬೇಕೆಂದು ಯೋಧನ ಕುಟುಂಬ ಹಠ ಹಿಡಿದಿತ್ತು. ಆದರೆ ಆಗ ಸಿಎಂ ಕುಟುಂಬದವರ ಜತೆ ದೂರವಾಣಿಯಲ್ಲಿ ಮಾತನಾಡಿ ಮುಂದೊಂದು ದಿನ ಖಂಡಿತಾ ನಿಮ್ಮನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ