ಹುತಾತ್ಮ ಎಸ್‌ಪಿ ಬಲ್ಜಿತ್ ಸಿಂಗ್ ತಂದೆ ಕೂಡಾ ಉಗ್ರರಿಗೆ ಬಲಿಯಾಗಿದ್ದರು

ಸೋಮವಾರ, 27 ಜುಲೈ 2015 (20:16 IST)
ಇಂದು ನಡೆದ ಉಗ್ರರ ದಾಳಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಲ್ಜಿತ್ ಸಿಂಗ್ ಅವರ ತಂದೆ ಕೂಡಾ 1984ರಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು. 
 
ಉಗ್ರರ ದಾಳಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಲ್ಜಿತ್ ಸಿಂಗ್ ಸೇರಿದಂತೆ ಮೂವರು ಪೊಲೀಸರು ನಾಲ್ಕು ಮಂದಿ ನಾಗರಿಕರು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.   
 
ಪೊಲೀಸ್ ಇಲಾಖೆಯಲ್ಲಿ ಇನ್ಸೆಪೆಕ್ಟರ್ ಹುದ್ದೆಯಲ್ಲಿದ್ದ ತಂದೆ ಉಗ್ರರಿಂದ ಹುತಾತ್ಮರಾದ ನಂತರ ಅನುಕಂಪದ ಆಧಾರದ ಮೇಲೆ  1985ರಲ್ಲಿ ಬಲ್ಜಿತ್ ಸಿಂಗ್ ಎಎಸ್‍‌ಐ ಆಗಿ ನೇಮಕಗೊಂಡಿದ್ದರು. 
 
ಹಲವಾರು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ನಂತರ ಗುರುದಾಸ್‌ಪುರ್‌ಗೆ ವರ್ಗವಾಗಿ ಬಂದಿದ್ದರು ಬಲ್ಜಿತ್ ಸಿಂಗ್ ಸಾವಿನ ಸುದ್ದಿ ತಿಳಿದು ನೂರಾರು ಸಂಖ್ಯೆಯ ಜನರು ಅವರ ಮನೆ ಮುಂದೆ ಜಮವಾಣೆಗೊಂಡು ಸಂತಾಪ ಸೂಚಿಸಿದರು.
 
 

ವೆಬ್ದುನಿಯಾವನ್ನು ಓದಿ