ಭಾರತದ ನೆಲದಲ್ಲಿ ಪಾಕ್ ಧ್ವಜ ಹಾರಿಸಿದ ದೇಶದ್ರೋಹಿ ಮಸ್ರತ್ ಆಲಂ

ಬುಧವಾರ, 15 ಏಪ್ರಿಲ್ 2015 (19:24 IST)
ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಪ್ರತ್ಯೇಕತಾವಾದಿ ನಾಯಕ ಮಸ್ರತ್ ಆಲಂ ಇಂದು ಶ್ರೀನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಲ್ಲದೇ ಪಾಕಿಸ್ತಾನದ ಧ್ವಜವನ್ನು ಹಾರಿಸಿ ದೋಶದ್ರೋಹಿ ಕೃತ್ಯವನ್ನು ಎಸಗಿದ್ದಾನೆ.

ಶ್ರೀವಗರದಲ್ಲಿ ಪಾಕ್ ಧ್ವಜ ಹಾರಿಸಿರುವ ಮಸ್ರತ್ ಆಲಂ ಕೃತ್ಯಕ್ಕೆ ದೇಶಾದ್ಯಂತ ಹಾಗೂ ಸಾಮಾಜಿಕ ತಾಣಗಳಲ್ಲಿ ಭಾರಿ ಟೀಕೆಗಳು ಕಂಡುಬಂದಿವೆ. ಕೂಡಲೇ ದೇಶದ್ರೋಹಿಯನ್ನು ಬಂಧಿಸಬೇಕು ಎಂದು ದೇಶದ ಜನತೆ ಒತ್ತಾಯಿಸಿದ್ದಾರೆ.

ಕಾಶ್ಮಿರಿ ಯುವಕರಿಗೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲು ಮತ್ತು ದೇಶ ವಿರೋಧಿ ಲೇಖನಗಳನ್ನು ಬರೆಯುವಂತೆ ಪ್ರಚೋದಿಸಿದ್ದ ಪ್ರತ್ಯೇಕತಾವಾದಿ ನಾಯಕ ಅಲಿ ಶಾ ಗಿಲಾನಿಯ ಉತ್ತರಾಧಿಕಾರಿಯಾದ 47 ವರ್ಷ ವಯಸ್ಸಿನ ಆಲಂ, ಸಾಮಾಜಿಕ ತಾಣಗಳಲ್ಲಿ, ಮಸೀದಿಗಳಲ್ಲಿ ಸಿಡಿ, ವಿಡಿಯೋಗಳ ಮೂಲಕ ತನ್ನ ಅಭಿಪ್ರಾಯಗಳನ್ನು ಮಂಡಿಸುವಲ್ಲಿ ಮುಂದಿದ್ದಾನೆ.

ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದ ಆಲಂ, ಸುಲಲಿತವಾಗಿ ಇಂಗ್ಲೀಷ್ ಮಾತನಾಡುತ್ತಾನೆ. 1990ರಲ್ಲಿ ಹಿಜ್ಬಲ್ ಉಗ್ರರ ಕಮಾಂಡರ್ ಹುದ್ದೆಯನ್ನು ನಿಭಾಯಿಸುತ್ತಿದ್ದ. 1991ರಲ್ಲಿ ಭದ್ರತಾ ಪಡೆಗಳ ವಶಕ್ಕೆ ಸಿಲುಕಿ ಸುಮಾರು 10 ವರ್ಷಗಳ ಜೈಲು ವಾಸ ಅನುಭವಿಸಿ ಇದೀಗ ಹೊರಬಂದಿದ್ದಾನೆ.

ವೆಬ್ದುನಿಯಾವನ್ನು ಓದಿ