ಮಸ್ರತ್ ಆಲಂ ಬಂಧನಕ್ಕೆ ಆಕ್ರೋಶ : ಹಿಂಸಾಚಾರಕ್ಕಿಳಿದ ಪ್ರತ್ಯೇಕತಾವಾದಿಗಳು

ಶುಕ್ರವಾರ, 17 ಏಪ್ರಿಲ್ 2015 (16:11 IST)
ಜಮ್ಮು ಕಾಶ್ಮಿರದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ವಿವಾದಕ್ಕೊಳಗಾಗಿದ್ದ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಬಂಧನ ವಿರೋಧಿಸಿ ಪ್ರತ್ಯೇಕತಾವಾದಿಗಳು ಹಿಂಸಾಚಾರಕ್ಕಿಳಿದಿದ್ದಾರೆ.

ಪ್ರತ್ಯೇಕತಾವಾದಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯ ಸಿಡಿಸಿದ್ದು, ಲಘು ಪ್ರಮಾಣದ ಲಾಠಿ ಚಾರ್ಜ್ ನಡೆಸಿದ್ದಾರೆ. ಹಿಂಸಾಚಾರದಲ್ಲಿ ಹಲವು ಜನರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರತದಲ್ಲಿ ಪಾಕ್ ಧ್ವಜ ಹಾರಿಸುವುದು ತಪ್ಪಲ್ಲ ಎಂದು ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ್ದ ಆಲಂ ವಿರುದ್ಧ ಮೋದಿ ನೇತೃತ್ವದ ಸರಕಾರ ಜಮ್ಮು ಕಾಶ್ಮಿರದ ಪಿಡಿಪಿ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿತ್ತು.

ಪೊಲೀಸರ ಮೇಲೆ ಆಲಂ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದು, ಆಲಂ ಬೆಂಬಲಿಗರನ್ನು ಹತ್ತಿಕ್ಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮಸರತ್ ಆಲಂ ನನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಪ್ರತ್ಯೇಕತಾವಾದಿಗಳು ಪಿಡಿಪಿ ಸರಕಾರವನ್ನು ಒತ್ತಾಯಿಸಿದ್ದಾರೆ.  


ವೆಬ್ದುನಿಯಾವನ್ನು ಓದಿ