15 ದಿನಗಳಿಗೆ ರೂ 4.33 ಲಕ್ಷ ವಿದ್ಯುತ್ ಬಿಲ್ ಪಡೆದ ಮೆಡಿಕಲ್ ಅಂಗಡಿ ಮಾಲೀಕ

ಗುರುವಾರ, 27 ನವೆಂಬರ್ 2014 (17:45 IST)
ವೈದ್ಯಕೀಯ ಅಂಗಡಿ ಮಾಲೀಕನೋರ್ವನಿಗೆ ಮಧ್ಯಪ್ರದೇಶದ ವಿದ್ಯುತ್ ಮಂಡಳಿ (ಎಂಪಿಇಬಿ) ಕೇವಲ 15 ದಿನಗಳ ವಿದ್ಯುತ್ ಬಳಕೆಗಾಗಿ 4.33 ಲಕ್ಷ ವಿದ್ಯುತ್ ಬಿಲ್ ವಿಧಿಸಿದೆ.  

ತಮ್ಮ ಅಂಗಡಿಯ ವಿದ್ಯುತ್ ಮೀಟರ್ ಕಡಿತಗೊಳಿಸುವಂತೆ ಮನವಿ ಮಾಡಿಕೊಂಡು ಬಾಕಿ ಇದ್ದ ಎಲ್ಲ ಬಿಲ್ ಸಂದಾಯ ಮಾಡಿದ ಮೇಲೂ ಅವರು ಈ ಭಾರೀ ಮೊತ್ತದ ಬಿಲ್ ಪಡೆದಿದ್ದಾರೆ. 
 
ನಗರದ ಅಶೋಕಾ ಗಾರ್ಡನ್‌ನಲ್ಲಿ ಒಂದು ಪುಟ್ಟ ಮೆಡಿಕಲ್ ಶಾಪ್ ನಡೆಸುವ ಬ್ರಿಜ್ ಮೋಹನ್ ಚೌಹಾನ್ ಶೀಘ್ರದಲ್ಲಿ ತನ್ನ ಅಂಗಡಿಯನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದಿದ್ದರು.
 
ಆ ಕಾರಣಕ್ಕೆ ನನ್ನ ಅಂಗಡಿಗೆ ಪಡೆದಿದ್ದ ವಿದ್ಯುತ್ ಕನೆಕ್ಸನ್ ಕಡಿತಗೊಳಿಸುವಂತೆ ನಾನು ಮಂಡಳಿಯವರಲ್ಲಿ ಮನವಿ ಮಾಡಿದ್ದೆ. ಸಿಬ್ಬಂದಿ 875 ರೂಪಾಯಿ ಹೆಚ್ಚಿನ ಮೊತ್ತವನ್ನು ಪಾವತಿಸುವಂತೆ ನನ್ನನ್ನು ಕೇಳಿದ್ದರು. ಅದರಂತೆ ನಾನು ಬಾಕಿ ಇದ್ದ ಎಲ್ಲ ಮೊತ್ತವನ್ನು ನಾನು ಕಳೆದ ನವೆಂಬರ್ 1 ರಂದು ಪಾವತಿಸಿದ್ದೆ " ಎಂದು ಚೌಹಾಣ್ ಹೇಳಿದ್ದಾರೆ. 
 
ಅನೇಕ ಬಾರಿ ಮನವಿ ಮಾಡಿಕೊಂಡರೂ  ಮಂಡಳಿ ವಿದ್ಯುತ್ ಮೀಟರ್‌ನ್ನು ಡಿಸ್ ಕನೆಕ್ಟ್ ಮಾಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
 
ನಾನು ನಾಲ್ಕನೇ ಬಾರಿಗೆ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಿದಾಗ ಅವರು ನನ್ನ ಬಳಿ ಅಫಿಡವಿಟ್ ಸಲ್ಲಿಸಲು ತಿಳಿಸಿದ್ದರು. ನಾನು ಹಾಗೇ ಮಾಡಿದೆ.  ಆದರೆ ಇನ್ನು ಕೂಡ ಮಂಡಳಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಿಲ್ಲ ಬದಲಿಗೆ, ನವೆಂಬರ್ 15 ರಂದು ನನಗೆ ರೂ 4.33 ಲಕ್ಷ ರೂಪಾಯಿಯ ಬಿಲ್ ಬಂದಿದೆ " ಎಂದು ಅವರು ಹೇಳಿದ್ದಾರೆ.
 
ಇದನ್ನು ಸರಿಪಡಿಸಲು ನಾನು ಪ್ರಯತ್ನಿಸಿದೆ ಮತ್ತು ಎಲ್ಲಾ ದಾಖಲೆಗಳನ್ನು ಮತ್ತು ನನ್ನ ಅರ್ಜಿಯ ನಕಲನ್ನು ಮಂಡಳಿಗೆ ಸಲ್ಲಿಸಿದೆ. ಆದರೆ ಎಮ್‌ಪಿಇಬಿ ಸಿಬ್ಬಂದಿ ನನಗೆ ಬಂದ ತಪ್ಪು ಬಿಲ್ಲನ್ನು ಸರಿಪಡಿಸುವ ಕಡೆ ಗಮನ ಹರಿಸಲಿಲ್ಲ ಬದಲಿಗೆ ಈ ವಿಷಯವನ್ನು ರೆವೆನ್ಯೂ ನ್ಯಾಯಾಲಯಕ್ಕೆ ವರ್ಗಾಯಿಸಿದರು. 
 
ಸಣ್ಣ  ಅಂಗಡಿ ನಡೆಸುವ ಯಾರಿಗಾದರೂ 15 ದಿನಗಳಲ್ಲಿ ರೂಪಾಯಿ 4.33 ಲಕ್ಷ ವಿದ್ಯುತ್ ಬಿಲ್ ಬರಲು ಸಾಧ್ಯವೇ ಎಂದು ಚೌಹಾಣ್ ಪ್ರಶ್ನಿಸಿದ್ದಾರೆ.
 
ಸರ್ಕಾರಿ ಅಧಿಕಾರಿಗಳು ನನ್ನನ್ನು ಬಲಿಪಶುವಾಗಿ ಬಳಸಿಕೊಂಡಿದ್ದಾರೆ  ಎಂದು ಅವರು ಹೇಳಿದ್ದಾರೆ.
 
ಚೌಹಾಣ್ ಗ್ರಾಹಕ ಹಿತರಕ್ಷಣಾ ವೇದಿಕೆಯಲ್ಲಿ ವಿದ್ಯುತ್ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಮುಂದಿನ ಮಂಗಳವಾರ ಈ ಕುರಿತು ಪ್ರತಿಕ್ರಿಯಿಸಲು ಎಮ್‌ಪಿಇಬಿ ಹಿರಿಯ ಅಧಿಕಾರಿ ನವನೀತ್ ಗುಪ್ತಾ  ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ