ವರ್ತಕರಿಗೆ ಸಾಲ ನೀಡುವ ಕೋಟ್ಯಾಧಿಪತಿ ಭಿಕ್ಷುಕನನ್ನು ನೋಡಿದ್ದೀರಾ?: ತಪ್ಪದೆ ಓದಿ

ಗುರುವಾರ, 3 ಮಾರ್ಚ್ 2016 (14:35 IST)
ಇಲ್ಲೊಬ್ಬ ಅಂಗವಿಕಲ ಭಿಕ್ಷುಕನಿದ್ದಾನೆ. ಇತನನ್ನು ನೋಡಿದರೆ, ಭಿಕ್ಷುಕರ ಬಗೆಗೆ ನಿಮಗಿರುವ ಭಾವನೆಗಳು ಮಾಯವಾಗುತ್ತದೆ. ಅಂಗವಿಕಲ ಭಿಕ್ಷುಕನ ಒಟ್ಟು ಆಸ್ತಿ ಮೌಲ್ಯ 1.25 ಕೋಟಿ ರೂಪಾಯಿಗಳು.
 
ಪಾಟ್ನಾ ಮೂಲದ ಭಿಕ್ಷುಕ ಪಪ್ಪು ಕುಮಾರ್ ಅಂಗವಿಕಲ ಭಿಕ್ಷುಕನಾಗಿದ್ದು, ನಾಲ್ಕು ಬ್ಯಾಂಕ್‌‌ಗಳಲ್ಲಿ ಖಾತೆಯನ್ನು ಹೊಂದಿದ್ದಾನೆ. ಇತನ ಒಟ್ಟು ಆಸ್ತಿ ಮೌಲ್ಯ ಅಂದಾಜು 1.25 ಕೋಟಿ ರೂ. ಇತರ ಭಿಕ್ಷುಕರಂತೆ ಪಪ್ಪು ಕುಮಾರ್ ಅನಕ್ಷರಸ್ಥನಲ್ಲ. ಭಿಕ್ಷುಕನಾಗುವ ಮುನ್ನ ಇಂಜಿನಿಯರ್ ಓದಬೇಕು ಎಂದು ಬಯಸಿದ್ದ ಯುವಕ.
 
ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಭದ್ರತಾ ದಳ ಭಿಕ್ಷುಕರನ್ನು ರೈಲ್ವೆ ನಿಲ್ದಾಣದಿಂದ ಎತ್ತಂಗಡಿ ಮಾಡಲು ನಿರ್ಧರಿಸಿದಾಗ ಪಪ್ಪು ಕುಮಾರನ ಶ್ರೀಮಂತಿಕೆ ಬೆಳಕಿಗೆ ಬಂದಿದೆ. ಆತನ ಬಳಿಯಿದ್ದ ಎಟಿಎಂ ಕಾರ್ಡ್‌ಗಳಲ್ಲಿ 10 ಲಕ್ಷ ರೂ, ನಗದು ಹಣ ಇರುವುದು ಪತ್ತೆಯಾಗಿದೆ.
 
ಸ್ಥಳೀಯ ವರದಿಗಳ ಪ್ರಕಾರ, ಚಿಕ್ಕ ಪುಟ್ಟ ವರ್ತಕರಿಗೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ನೀಡಿರುವುದು ಪತ್ತೆಯಾಗಿದೆ.
 
ಭಿಕ್ಷುಕನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ, ಉಳಿತಾಯ ಖಾತೆಯಲ್ಲಿ 5 ಲಕ್ಷ ನಗದು, ವರ್ತಕರಿಗೆ ಬಡ್ಡಿ ದರದಲ್ಲಿ ನೀಡಿದ 10 ಲಕ್ಷ ರೂಪಾಯಿಗಳ ಸಾಲ ಸೇರಿದಂತೆ ಮತ್ತಷ್ಟು ಅಚ್ಚರಿಯ ಸಂಗತಿಗಳು ಬಹಿರಂಗವಾಗಿವೆ.
 
ಆಸ್ಪತ್ರೆಗೆ ದಾಖಲಾಗಿ ಕಾಲು ಮತ್ತು ಕೈಗಳಿಗಾದ ಗಾಯವನ್ನು ಗುಣಪಡಿಸಿಕೊಳ್ಳುವಂತೆ ರೈಲ್ವೆ ಅಧಿಕಾರಿಗಳು ಭಿಕ್ಷುಕನಿಗೆ ಸಲಹೆ ನೀಡಿದಾಗ, ಒಂದು ವೇಳೆ ಕಾಲು ಮತ್ತು ಕೈ ಗಾಯಗಳು ಗುಣವಾದಲ್ಲಿ ಭಿಕ್ಷೆ ಬೇಡುವುದು ಹೇಗೆ ಎಂದು ಪ್ರಶ್ನಿಸಿದ್ದಾನೆ. 

ವೆಬ್ದುನಿಯಾವನ್ನು ಓದಿ