ಕಾಶ್ಮಿರಿ ಪಂಡಿತರಿಗಾಗಿ ಪ್ರತ್ಯೇಕ ಕಾಲೋನಿಗಳ ನಿರ್ಮಾಣವಿಲ್ಲ: ಸಿಎಂ ಮುಫ್ತಿ ಸ್ಪಷ್ಟನೆ

ಶನಿವಾರ, 28 ಮೇ 2016 (19:42 IST)
ಕಾಶ್ಮಿರ ಪಂಡಿತರಿಗಾಗಿ ಪ್ರತ್ಯೇಕ ಕಾಲೋನಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಜಮ್ಮು ಕಾಶ್ಮಿರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
 
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಮುಫ್ತಿ, ಕಾಶ್ಮಿರ ಪಂಡಿತರನ್ನು ಗೌರವದಿಂದ ವಾಪಸ್ ಕರೆಸಿಕೊಂಡು ನಾವೆಲ್ಲರು ಜೊತೆಯಾಗಿಯೇ ಬಾಳುತ್ತೇವೆ ಎಂದು ತಿಳಿಸಿದ್ದಾರೆ.
 
ಸೇನಾಪಡೆಗಳ ನಿವೃತ್ತ ಅಧಿಕಾರಿಗಳಿಗಾಗಿ ಪ್ರತ್ಯೇಕ ಕಾಲೋನಿಗಳನ್ನು ನಿರ್ಮಿಸಲಾಗುವುದು. ಹೊರಗಿನಿಂದ ಬಂದು ರಾಜ್ಯದಲ್ಲಿ ನಿವೃತ್ತಿಯಾದವರಿಗೆ ಪ್ರತ್ಯೇಕ ಕಾಲೋನಿಗಳಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.   
 
ಹಿಂದಿನ ಸರಕಾರ ಅಧಿಕಾರದಲ್ಲಿದ್ದಾಗ ನಿವೃತ್ತ ಸೈನಿಕರಿಗೆ ಪ್ರತ್ಯೇಕ ಕಾಲೋನಿಗಳನ್ನು ನಿರ್ಮಿಸಬೇಕು ಎನ್ನುವ ಪ್ರಸ್ತಾವನೆಯಿದೆ. ಆದರೆ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.
 
ನಮ್ಮ ಸರಕಾರದ ಅವಧಿಯಲ್ಲಿ  ರಾಜ್ಯಪಾಲರು ನಿವೃತ್ತ ಸೈನಿಕರ ಕಾಲೋನಿಗಳಿಗಾಗಿ ಭೂಮಿಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಆದರೆ, ಇಲ್ಲಿಯವರೆಗೆ ಭೂಮಿಯನ್ನು ಗುರುತಿಸಲಾಗಿಲ್ಲ ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಾಹಿತಿ ನೀಡಿದ್ದಾರೆ.

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ