ಹೆಸರಿಗೆ ಮಾನಸಿಕ ವಿಕಲ್ಪ ಮಕ್ಕಳ ಶಾಲೆ, ಆದರೆ ಮಕ್ಕಳೇ ಇಲ್ಲ

ಗುರುವಾರ, 5 ಮಾರ್ಚ್ 2015 (14:50 IST)
ಮಹಾರಾಷ್ಟ್ರದ  ಮಾನಸಿಕ ವಿಕಲ್ಪ ಮಕ್ಕಳ ಶಾಲೆಗೆ ದಿಢೀರ್ ಭೇಟಿ ನೀಡಿದ ಸಚಿವರೊಬ್ಬರಿಗೆ ಅಲ್ಲಿನ ಪರಿಸ್ಥಿತಿ ನೋಡಿ ಆಘಾತವಾಯಿತು. ಬುಧವಾರ 
ಸಾಮಾಜಿಕ ನ್ಯಾಯ ಖಾತೆ ಸಚಿವ ರಾಜಕುಮಾರ್ ಬಡೋಲೆ ಆಶ್ರಯ ರೆಸಿಡೆನ್ಶಿಯಲ್ ಶಾಲೆಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಎಲ್ಲರೂ ರಜೆ ಮೇಲಿದ್ದಾರೆಂದು ತಿಳಿಸಲಾಯಿತು.

ಆ ಶಾಲೆಯಲ್ಲಿ ಸುಮಾರು 80 ಮಾನಸಿಕ ವಿಕಲ್ಪ ಮಕ್ಕಳು ಮತ್ತು 25 ಶಿಕ್ಷಕರು ಹಾಗು ಇತರೆ ಸಿಬ್ಬಂದಿ ಇದ್ದರು. ಆದರೆ ಇವರ ಹೆಸರುಗಳೆಲ್ಲಾ ಕಾಗದಪತ್ರದಲ್ಲಿ ಮಾತ್ರ ಇದ್ದಿದ್ದು ಸಚಿವರಿಗೆ ಮನವರಿಕೆಯಾಯಿತು. 
 
ಎಲ್ಲರೂ ರಜೆ ಮೇಲೆ ಹೋಗಿದ್ದಾರೆಯೇ, ಇದೊಂದು ವಿಚಿತ್ರವಲ್ಲವೇ ಎಂದು ಖಾಲಿಯಾದ ತರಗತಿಗಳು ಮತ್ತು ಆವರಣದಲ್ಲಿ ಅಡ್ಡಾಡುತ್ತಾ ಸಚಿವರು ಹೇಳಿದರು. ಮಾನಸಿಕ ವಿಕಲ್ಪ ಮಕ್ಕಳಿಗೆ 120 ವಸತಿ ಶಾಲೆಗಳು ಮಹಾರಾಷ್ಟ್ರದಲ್ಲಿದ್ದು, ಇವುಗಳಲ್ಲಿ ನಿಜವಾಗಲೂ ಅಸ್ತಿತ್ವದಲ್ಲಿರುವ ಶಾಲೆಗಳ ಬಗ್ಗೆ ತನಿಖೆ ನಡೆಸುವುದಾಗಿ ಬಾಡೋಲೆ ಹೇಳಿದರು.  ಸಾವಲಂಬನ್‌ನ ಇನ್ನೊಂದು ವಸತಿ ಶಾಲೆಯಲ್ಲಿ 50 ಮಕ್ಕಳಿಗೆ ಅನುಮತಿ ನೀಡಿದ್ದರೂ ಕೇವಲ 12 ಮಕ್ಕಳು ಕಾಣಿಸಿಕೊಂಡಿದ್ದರು.
 
ಸಚಿವರ ಭೇಟಿಯಿಂದ ಕೇವಲ ಕಾಗದಪತ್ರಗಳಲ್ಲಿ ಮಾತ್ರ ಶಾಲೆಗಳಿದ್ದು, ಅವುಗಳಲ್ಲಿ ಮಕ್ಕಳ ನಕಲಿ ನೋಂದಣಿಗಳನ್ನು ಮಾಡಿರುವುದು ಬೆಳಕಿಗೆ ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ ಕೋಟ್ಯಂತರ ರೂ.ಗಳು ನಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ