ಪ್ರಧಾನಿ ಮೋದಿಯನ್ನು ಭೇಟಿಯಾದ ಮೈಕ್ರೋಸಾಫ್ಟ್ ಸಿಇಓ ಸತ್ಯ ನಡೆಲ್ಲಾ

ಶನಿವಾರ, 27 ಡಿಸೆಂಬರ್ 2014 (16:58 IST)
ಡಿಜಿಟಲ್ ಭಾರತ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯೊಂದಿಗೆ ಪಾಲುದಾರಿಕೆ ನಡೆಸಲು ತಮ್ಮ ಕಂಪನಿ ಉತ್ಸುಕವಾಗಿದೆ ಎಂದು  ಜಾಗತಿಕ ಐಟಿ ದೈತ್ಯ ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯನಾರಾಯಣ ನಡೆಲ್ಲ ಹೇಳಿದ್ದಾರೆ. 
ಶುಕ್ರವಾರ ಪ್ರಧಾನಿ ಮೋದಿ ಹಾಗೂ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರನ್ನು ಭೇಟಿಯಾಗಿ ನಡೆಲ್ಲ ಮಾತುಕತೆ ನಡೆಸಿದರು.
 
ರವಿಶಂಕರ್ ಪ್ರಸಾದ್ ಜತೆ  ಚರ್ಚೆ ನಡೆಸಿದ ನಂತರ ಮಾತನಾಡುತ್ತಿದ್ದ ಅವರು ವೈಯಕ್ತಿಕವಾಗಿ ಭಾರತದಲ್ಲಿರುವುದು ನನಗೆ ಯಾವಾಗಲೂ ಬಹಳ ಅದ್ಭುತವಾದ ವಿಷಯ. ಸಚಿವರ ಜತೆ ನಡೆಸಿದ ಮಾತುಕತೆ ವಿಸ್ತೃತ ಶ್ರೇಣಿಯದಾಗಿತ್ತು ಎಂದು ಹೇಳಿದ್ದಾರೆ.
 
 ಭಾರತದ ಪ್ರತಿಯೊಬ್ಬ ವ್ಯಕ್ತಿ, ಪ್ರತಿ ವ್ಯಾಪಾರಿ ಸಂಸ್ಥೆಗಳನ್ನು ಹೊಸ ತಂತ್ರಜ್ಞಾನದ ಜತೆ ಜೋಡಿಸಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ. ಆದ್ದರಿಂದ ಮೇಕ್ ಇನ್ ಇಂಡಿಯಾ ಮತ್ತು  ಡಿಜಿಟಲ್ ಭಾರತದ ಭಾಗವಾಗಲು ನಾನು ಕಾತುರನಾಗಿದ್ದೇನೆ ಎಂದು ಜಾಗತಿಕ ಐಟಿ ದೈತ್ಯ ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯನಾರಾಯಣ ನಡೆಲ್ಲ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ