ಸಣ್ಣಪುಟ್ಟ ಯುದ್ಧಗಳಿಗೆ ಸೇನೆ ಸಿದ್ಧವಾಗಿರುವ ಅಗತ್ಯವಿದೆ: ದಲ್ಬೀರ್ ಸಿಂಗ್

ಮಂಗಳವಾರ, 1 ಸೆಪ್ಟಂಬರ್ 2015 (17:45 IST)
ಸಣ್ಣಪುಟ್ಟ ಯುದ್ಧಗಳಿಗೆ ಸೇನೆ ಸಿದ್ಧವಾಗಿರಬೇಕಾದ ಅಗತ್ಯವಿದೆ ಎನ್ನುವ ಮೂಲಕ ಸೇನಾ ವರಿಷ್ಠ ದಲ್ಬೀರ್ ಸಿಂಗ್ ಪಾಕ್ ಮತ್ತು ಭಾರತದ ನಡುವೆ ಯುದ್ಧದ ಸಾಧ್ಯತೆಗಳಿವೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. 

ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದರಿಂದ ನಮ್ಮ ಸೈನ್ಯ ಹೆಚ್ಚು ಜಾಕರೂಕತೆಯನ್ನು ತಾಳಿದೆ ಎಂದು ಅವರು ತಿಳಿಸಿದ್ದಾರೆ. 
 
1965 ಇಂಡೋ ಪಾಕ್ ಯುದ್ಧದ ಮೇಲೆ ಮಂಗಳವಾರ ಟ್ರೈ ಸರ್ವಿಸ್ ವಿಚಾರಸಂಕಿರಣವೊಂದರಲ್ಲಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಮತ್ತು ಅತಿಕ್ರಮಣಕ್ಕೆ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ  ಸಣ್ಣಪುಟ್ಟ ಯುದ್ಧಗಳಿಗೆ ನಾವು ಸಿದ್ಧರಾಗಿರಬೇಕಾದ ಅಗತ್ಯವಿದೆ ಎಂದು ಹೇಳಿದರು.
 
'ನಮಗೆದುರಾಗುತ್ತಿರುವ ಬೆದರಿಕೆಗಳು ಮತ್ತು ಸವಾಲುಗಳು ಸಂಕೀರ್ಣವಾಗಿ ಮಾರ್ಪಟ್ಟಿವೆ. ಪಾಕ್ ಗಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ನಮ್ಮ ಸೈನಿಕರನ್ನು ಮೊದಲಿಗಿಂತ ಹೆಚ್ಚು ಹೆಚ್ಚು ಜಾಕರೂಕತೆಯನ್ನು ಹೊಂದುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಹೊಸ ಹೊಸ ವಿಧಾನಗಳನ್ನು ಪಾಕ್ ಅನುಸರಿಸುತ್ತಿದೆ', ಎಂದು ದಲ್ಬೀರ್ ಸಿಂಗ್ ಆತಂಕ ವ್ಯಕ್ತ ಪಡಿಸಿದ್ದಾರೆ.
 
1965 ರ ಯುದ್ಧದ ಬಗ್ಗೆ ಮಾತನಾಡುತ್ತಾ, ಸಿಂಗ್ ಭಾರತದ ಗಡಿಯನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ವೀರ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ