ಮದ್ಯ ಸೇವನೆಯ ಕನಿಷ್ಠ ವಯಸ್ಸನ್ನು 18ರಿಂದ 21 ಕ್ಕೆ ಏರಿಸಿ: ಕಾಂಗ್ರೆಸ್

ಮಂಗಳವಾರ, 30 ಜೂನ್ 2015 (20:51 IST)
ಮದ್ಯ ಸೇವನೆಯ ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸುವಂತೆ ಉತ್ತರಾಖಂಡ್ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಒತ್ತಾಯಿಸಲಾಗಿದೆ. 
 
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಆನಂದ್ ರಾವತ್, ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಮನವಿ ಸಲ್ಲಿಸಿದ್ದು, ಮದ್ಯ ಸೇವನೆಯ ವಯಸ್ಸನ್ನು 18ರಿಂದ 21ಕ್ಕೆ ಏರಿಸುವಂತೆ ಒತ್ತಡ ಹೇರಿದ್ದಾರೆ. 
 
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮದ್ಯಸೇವನೆಯ ವಯಸ್ಸು 21ರಿಂದ 25ಕ್ಕೆ ಏರಿಸಲಾಗಿದೆ ಎಂದು ಉದಾಹರಣೆ ನೀಡಿದ ರಾವತ್, ಅದರಂತೆ ಉತ್ತರಾಖಂಡ್‌ನಲ್ಲೂ ಮದ್ಯ ಸೇವನೆಯ ವಯಸ್ಸು ಹೆಚ್ಚಿಸುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿದ್ದಾರೆ.
 
ಇದರಿಂದಾಗಿ ಹದಿಹರೆಯದ ವಯಸ್ಸಿನಲ್ಲಿ ಯುವಕರು ಮದ್ಯವ್ಯಸನಿಯಾಗುವದನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. 
 
ರಾಜ್ಯದಲ್ಲಿ ಡ್ರಗ್ ಪ್ರೆವೆನ್ಶನ್ ಬೋರ್ಡ್ ಸ್ಥಾಪಿಸುವಂತೆ ಒತ್ತಾಯಿಸಿದ ಅವರು, ಸಾಮಾಜಿಕ ಮತ್ತು ರಾಜಕೀಯ ಪಕ್ಷಗಳು ಜಂಟಿಯಾಗಿ ಕಾರ್ಯನಿರ್ವಹಿಸಿ ರಾಜ್ಯವನ್ನು ಡ್ರಗ್ಸ್ ಮುಕ್ತವಾಗಿಸಬೇಕು ಎಂದು ಕೋರಿದರು.
 
ಉತ್ತರಾಖಂಡ ರಾಜ್ಯದ ಡೆಹರಾಡೂನ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಡ್ರಗ್ಸ್ ವಿರೋಧಿ( ನಯೀ ಜಿಂದಗಿ) ಪ್ರಚಾರವನ್ನು ವಿಸ್ತರಿಸುವಂತೆ ಪೊಲೀಸರಿಗೆ ಆದೇಶ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಆನಂದ್ ರಾವತ್ ಮನವಿ ಮಾಡಿದ್ದಾರೆ.   
 

ವೆಬ್ದುನಿಯಾವನ್ನು ಓದಿ