ಪ್ರಧಾನಿ ಮೋದಿಯನ್ನು ಮಹಾತ್ಮಾ ಗಾಂಧಿಗೆ ಹೋಲಿಸಿ ವಿವಾದಕ್ಕೀಡಾದ ಸಚಿವ

ಶನಿವಾರ, 27 ಮೇ 2017 (18:54 IST)
ರಾಯ್ ಪುರ: ಪ್ರಧಾನಿ ಮೋದಿಯನ್ನು ಹೊಗಳುವ ಭರದಲ್ಲಿ ಕ್ರೀಡಾ ಸಚಿವ ವಿಜಯ್ ಗೋಯೆಲ್  ವಿವಾದಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಅವರು ಹೇಳದ್ದೇನು?

 
ಪ್ರಧಾನಿ ಮೋದಿಯನ್ನು ದೇಶದ ಎರಡನೇ ಮಹಾತ್ಮಾ ಗಾಂಧಿ ಎಂದು ಕರೆದು ಅವರು ಟೀಕೆಗೆ ಗುರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅವರು ಈ ಎಡವಟ್ಟು ಮಾಡಿಕೊಂಡಿದ್ದಾರೆ.

‘ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡಾ ಪ್ರಧಾನಿ ಮೋದಿ ಕಾರ್ಯವೈಖರಿಗೆ ಎಷ್ಟು ಮೆಚ್ಚಿಕೊಂಡಿದ್ದಾರೆಂದರೆ, ಮಾಜಿ ಪ್ರಧಾನಿ ನೆಹರೂಗೆ ಹೋಲಿಸಿದ್ದಾರೆ. ಆದರೆ ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಾತ್ಮಾ ಗಾಂಧಿಗೆ ಹೋಲಿಸಲು ಬಯಸುತ್ತೇನೆ’ ಎಂದಿದ್ದಾರೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ