ಮೂವರು ಯುವಕರಿಂದ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

ಶುಕ್ರವಾರ, 29 ಜನವರಿ 2016 (16:15 IST)
ಜಿಲ್ಲೆಯ ಅಂಬೇಟಾ ಗ್ರಾಮದಲ್ಲಿ ಮೂವರು ಆರೋಪಿಗಳು 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
 
ಕಳೆದ 2013ರಲ್ಲಿ ನಡೆದ ಮುಜಾಫರ್‌ನಗರ್ ಗಲಭೆಯ ನಂತರ ನಿರಾಶ್ರಿತ ಪುನರ್‌ವಸತಿ ಕೇಂದ್ರದಲ್ಲಿ ತನ್ನ ಪೋಷಕರೊಂದಿಗೆ ವಾಸವಾಗಿದ್ದ ಬಾಲಿಕ ಹೊಲದಲ್ಲಿ ಮೇವು ತರಲು ತನ್ನ ಸಹೋದರ ಝಲ್ಫಾಮ್‌ನೊಂದಿಗೆ ತೆರಳಿದ್ದಾಗ ಅತ್ಯಾಚಾರದ ಘಟನೆ ನಡೆದಿದೆ.
 
ಗ್ರಾಮದ ಮುಖ್ಯಸ್ಥನ ಪುತ್ರ ಮತ್ತು ಆತನ ಇಬ್ಬರು ಸಹಚರರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎನ್‌.ಪಿ.ಸಿಂಗ್ ತಿಳಿಸಿದ್ದಾರೆ. 
 
ಪುತ್ರಿಯ ಮೇಲೆ ನಡೆದ ಅತ್ಯಾಚಾರ ಕುರಿತಂತೆ ಪ್ರತಿಭಟನೆ ವ್ಯಕ್ತಪಡಿಸಿದ ಬಾಲಕಿಯ ಪೋಷಕರಿಗೆ ಆರೋಪಿಯ ಬೆಂಬಲಿಗರು ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ನಂತರ ಬಾಲಕಿಯ ಸಹೋದರ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ