400 ರೂಪಾಯಿಗಳಿಗು ಸಿಗುತ್ತಿಲ್ಲ ಮಾಡೆಲ್‌ ಭಿಕ್ಷುಕರು !

ಶುಕ್ರವಾರ, 22 ಆಗಸ್ಟ್ 2014 (18:23 IST)
80ರ ದಶಕದ ಹಿಂದಿ ಸಿನೆಮಾ 'ಕುಂವಾರಾ ಬಾಪ್‌ನಲ್ಲಿ  ಬಾಪ್ ಬಡಾ ನಾ ಭೈಯ್ಯಾ, ಬಾಬು ಸಬ್‌ಸೆ ಬಡಾ ರೂಪೈಯಾ"  ಹಾಡು ಇತ್ತೀಚಿನ ನಗರಗಳ ಭಿಕ್ಷುಕರಿಗೆ ಅನ್ವಯಿಸುತ್ತದೆ. ಭಿಕ್ಷೆ ಬೇಡಿ ಹಣ ಗಳಿಸುವ ಈ ಭಿಕ್ಷುಕರು, ಫೈನ್‌ ಆರ್ಟ್‌ ಕಾಲೇಜನ್‌ ವಿಧ್ಯಾರ್ಥಿಗಳ ಪೇಂಟಿಂಗ್‌‌‌ಗಾಗಿ ಪೋಸ್ ಕೊಡಲು ನಾಲ್ಕು ಗಂಟೆಗೆ ನಾಲ್ಕು ನೂರು ರೂಪಾಯಿಗಳನ್ನು ಕೊಡಲು ಸಿದ್ದವಾಗಿದ್ದರೂ ಭಿಕಾರಿಗಳು ದೊರೆಯುತ್ತಿಲ್ಲವಂತೆ.
 
ಫೈನ್‌ ಆರ್ಟ್‌ ವಿಧ್ಯಾರ್ಥಿಗಳು ಭಿಕ್ಷುಕರನ್ನು ಎದುರು ಕೂಡಿಸಿಕೊಂಡು ಜೀವಂತ ಪೆಂಟಿಂಗ್‌‌‌ ಮಾಡುವ ಅಭ್ಯಾಸ ಮಾಡುತ್ತಾರೆ. ಈ ತರದ ದೃಶ್ಯಗಳು ಸರಕಾರಿ ಲಲಿತ ಕಲಾ ಮಹಾವಿದ್ಯಾಲಯ(ಫೈನ್‌ ಆರ್ಟ್‌ ಕಾಲೇಜ್‌)ನಲ್ಲಿ ನೋಡಲು ಸಿಗುತ್ತದೆ. ಇಲ್ಲಿ ಪ್ರತಿ ಮೂರ್ತಿಕಲೆ ಮತ್ತು ಚಿತ್ರಕಲೆಯಲ್ಲಿ ಪ್ರತಿ ಮಾಡೆಲ್‌‌ಗೆ ದಿನದ ಲೆಕ್ಕದಲ್ಲಿ 133 ರೂಪಾಯಿ ಪಾವತಿಸಲಾಗುತ್ತದೆ.
 
ಆದರೆ ಇಷ್ಟಕ್ಕೆ ಯಾವುದೇ ಭಿಕ್ಷುಕ ಮಾಡೆಲ್‌‌ ಆಗಲು ಸಿದ್ದರಾಗಿರುವುದಿಲ್ಲ. ಅನಿವಾರ್ಯವಾಗಿ, ವಿದ್ಯಾರ್ಥಿಗಳು ತಮ್ಮ ಜೇಬಿನಿಂದ ಅಥವಾ ಚಂದಾ ಎತ್ತಿ ಭಿಕ್ಷುಕರಿಗೆ 300-400 ರೂಪಾಯಿ ನೀಡಿಲು ಸಿದ್ದವಾಗಿದ್ದರೂ ಕೂಡ ಭಿಕ್ಷುಕರು ಬರಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. 
 
ವಿದ್ಯಾರ್ಥಿಗಳಿಗೆ ಮೂರ್ತಿಕಲೆ ಮತ್ತು ಚಿತ್ರಕಲೆಯಲ್ಲಿ ಸಂಪೂರ್ಣ ಪೇಂಟಿಂಗ್‌ ಮುಗಿಸಲು ಮೂರರಿಂದ ಆರುದಿನಗಳ ಅವಧಿ ಬೇಕಾಗುತ್ತದೆ. ಮೊದಲ ಮೂರು ದಿನ ಭಿಕ್ಷುಕರ ಸ್ಕೆಚ್‌ ಸಿದ್ದಪಡಿಸುತ್ತಾರೆ, ನಾಲ್ಕನೇ ದಿನ ಡ್ರಾಯಿಂಗ್‌ ಮಾಡುತ್ತಾರೆ. 
 
ಇದರ ನಂತರ ಎರಡು ದಿನಗಳ ಪೂರ್ತಿ ಫಿಗರ್‌ ಲೈಫ್‌ ಸ್ಟಡಿ ಇರುತ್ತದೆ. ಇದಕ್ಕಾಗಿ ಪ್ರತಿದಿನ ಭಿಕ್ಷುಕರಿಗೆ ನಾಲ್ಕರಿಂದ ಆರುಗಂಟೆಗಳ ಕಾಲ ವಿಧ್ಯಾರ್ಥಿಗಳ ಎದುರಿಗೆ ಕುಳಿತಿರಬೇಕಾಗುತ್ತದೆ. ನಡುವೆ ವಿಧ್ಯಾರ್ಥಿಗಳು ಎರಡರಿಂದ ಮೂರು ಬ್ರೆಕ್‌ ಕೂಡ ತೆಗೆದುಕೊಳ್ಳುತ್ತಾರೆ. ಈ ನಡುವೆ ಭಿಕ್ಷುಕರು ವಿದ್ಯಾರ್ಥಿಗಳಿಗೆ ತಿಂಡಿ ಮತ್ತು ಪಾನೀಯದ ಬೇಡಿಕೆಯನ್ನಿಡುತ್ತಾರೆ. ಕಾಲೇಜು ಆಡಳಿತ ಮಂಡಳಿಯ ಅನುಸಾರ ಪದವಿ ಮತ್ತು ಸ್ನಾತಕೋತ್ತರ ಪದವಿಯ 12 ಸೆಮಿಸ್ಟರ್‌‌‌‌ನಲ್ಲಿ ಭಿಕ್ಷುಕರ ಖರ್ಚು ವರ್ಷಕ್ಕೆ 30 ರಿಂದ 35 ಸಾವಿರ ರೂಪಾಯಿ ಆಗುತ್ತದೆ ಎಂದು ಮೂಲಗಳು ತಿಳಿಸಿವೆ.. 

ವೆಬ್ದುನಿಯಾವನ್ನು ಓದಿ