ಡಿಜಿಟಲ್ ಇಂಡಿಯಾಗೆ ಅವಮಾನ; ಯುವತಿಯರಿಗೆ ಮೊಬೈಲ್, ಫೇಸ್‌ಬುಕ್ ಬ್ಯಾನ್ ಮಾಡಿದ ಪಂಚಾಯತ್

ಗುರುವಾರ, 2 ಜುಲೈ 2015 (16:51 IST)
ಹಳ್ಳಿ ಹಳ್ಳಿಗಳಿಗೆ ಅಂತರ್ಜಾಲವನ್ನು ತಲುಪಿಸುವ ಉದ್ದೇಶದಿಂದ ಪ್ರಧಾನಿ ಮೋದಿಯವರು ಬುಧವಾರವಷ್ಟೇ ಮಹಾತ್ವಾಕಾಂಕ್ಷಿ  ಡಿಜಿಟಲ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದ್ದಾರೆ. ಇದಕ್ಕೆ ವ್ಯತಿರಿಕ್ತ ಎನ್ನುವಂತೆ ರಾಜಸ್ಥಾನದ ಪಂಚಾಯತ್ ಒಂದು ತಮ್ಮ ಗ್ರಾಮದ ಯುವತಿಯರಿಗೆ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಗೆ ನಿಷೇಧ ಹೇರಿದೆ. 

ಈ ಮೂಲಕ ಮೋದಿಯವರ ಮಹದುದ್ದೇಶದ ಯೋಜನೆಗೆ ತೊಡಕು ಎನಿಸುವಂತ ಸಮಸ್ಯೆಯಾಗಿ ಇದು ಬೆಳಕಿಗೆ ಬಂದಿದೆ. 
 
ಕನಾನಾ ಗ್ರಾಮದ  ಸಮ್ದಾರಿ ಪಂಚಾಯತ್  ಯುವತಿಯರಿಗೆ ಜೀನ್ಸ್ ಧರಿಸದಂತೆ ಎಚ್ಚರಿಕೆ ನೀಡಿದ್ದು, ಮದುವೆ ಸಮಯದಲ್ಲಿ ವರ ಧೋತಿಯನ್ನೇ ಉಡಬೇಕು ಎಂದು ಆದೇಶಿಸಿದೆ. 
 
ವಿಚಿತ್ರವೆಂದರೆ ಇದೇ ಪಂಚಾಯತ್, ಈ ಮೊದಲು ತಂದ ಕೆಲವು ಆದೇಶಗಳಿಗೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಲ್ಯವಿವಾಹ, ಮದ್ಯ ಮಾರಾಟದ ಮೇಲೆ ನಿಷೇಧ ಹೇರಿದ್ದ ಪಂಚಾಯತ್, ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಗ್ರಾಮಸ್ಥರಿಗೆ ನಿರ್ದೇಶನ ನೀಡಿತ್ತು. 

ವೆಬ್ದುನಿಯಾವನ್ನು ಓದಿ