ಮೋದಿ ಕ್ರೂರಿ, ದೆವ್ವ ಎಂದ ಓವೈಸಿ

ಸೋಮವಾರ, 5 ಅಕ್ಟೋಬರ್ 2015 (10:55 IST)
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಗಮನ ಸೆಳೆಯುವ ಎಐಎಮ್ಐಎಮ್ ನಾಯಕ ಅಕ್ಬರುದ್ದೀನ್‌ ಓವೈಸಿ ಪ್ರಧಾನಿ ಮೋದಿಯನ್ನು ಕ್ರೂರಿ ಮತ್ತು ದೆವ್ವ ಎಂದು ಹೇಳುವುದರ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ

ಬಿಹಾರದ ಕಿಶನ್‌ಗಂಜ್‌ನಲ್ಲಿ ಭಾನುವಾರ ತಮ್ಮ ಮೊದಲ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದ ಅವರು, ಪ್ರಧಾನಿ 2002ರಲ್ಲಿ ನಡೆದ ಗುಜರಾತ್ ದಂಗೆಯನ್ನು ಉಲ್ಲೇಖಿಸಿ, ಮೋದಿಯವರನ್ನು ಝಾಲಿಮ್ (ಕ್ರೂರಿ) ಮತ್ತು ಶೈತಾನ್ (ದೆವ್ವ) ಎಂದು ಜರಿದಿದ್ದಾರೆ. 
 
"ಮೋದಿ ಕ್ರೂರಿ ಮತ್ತು ಭೂತ ಹಾಗೂ 2002ರ ಗುಜರಾತ್ ಗಲಭೆಗೆ ಅವರೇ ಬಾಧ್ಯಸ್ಥರು", ಎಂದು ಅವರು ಆರೋಪಿಸಿದ್ದಾರೆ. 
 
"ನನ್ನನ್ನು ಸೇರಿದಂತೆ ಹಲವರ ಪ್ರಕಾರ ಗುಜರಾತ್ ಗಲಭೆಗೆ ಕಾರಣ ಮೋದಿ ಹೊರತು ಇನ್ಯಾರೂ ಅಲ್ಲ. 2004ರಲ್ಲಿ ಕಾಂಗ್ರೆಸ್‌ ಈ ಸೈತಾನನ ಮೇಲೆ ಎಫ್‌ಐಆರ್ ದಾಖಲಿಸಿ, ಜೈಲಿಗೆ ಹಾರಿದ್ದರೆ ಅವರಿಂದು ಪ್ರಧಾನಿಯಾಗುತ್ತಿರಲಿಲ್ಲ. ಕಾಂಗ್ರೆಸ್‌ ದುರ್ಬಲತೆ ಬಳಸಿಕೊಂಡು ಅವರಿಂದು ಪ್ರಧಾನಿಯಾಗಿದ್ದಾರೆ", ಎಂದು ತೆಲಂಗಾಣದ ಶಾಸಕ ಮತ್ತು ಎಐಎಮ್ಐಎಮ್ ವರಿಷ್ಠ ಅಸಾವುದ್ದೀನ್ ಓವೈಸಿ ಸಹೋದರ ಅಕ್ಬರುದ್ದೀನ್ ಹೇಳಿದ್ದಾರೆ. 
 
"ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ವಿರುದ್ಧ ಕೂಡ ಹರಿಹಾಯ್ದ ಅವರು‌, ತಾಕತ್ತಿದ್ದರೆ, ಗಿರಿರಾಜ್‌ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಲಿ ನೋಡೋಣ," ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ದೇಶದಲ್ಲಿ ಅಮಾಯಕ ಮುಸ್ಲಿಮರ ಮೇಲೆ ಶೋಷಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 
 
ಎಐಎಮ್ಐಎಮ್ ಬಿಹಾರದಲ್ಲಿ ಮುಸ್ಲಿಂ ಪ್ರಾಬಲ್ಯ ಉಳ್ಳ ಜಿಲ್ಲೆಗಳಾದ ಕಿಶನ್‌ಗಂಜ್, ಪುರ್ನೆಯಾ,ಅರಾರಿಯಾ, ಕತಿಹಾರ್ ಜಿಲ್ಲೆಗಳಲ್ಲಿ 24 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದೆ. ರಾಜ್ಯದ 105 ಮಿಲಿಯನ್ ಜನಸಂಖ್ಯೆಯಲ್ಲಿ ಪ್ರತಿಶತ 16.5 ಮುಸ್ಲಿಮರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ