ನೋಟು ನಿಷೇಧದಿಂದ ದೀರ್ಘಾವಧಿಯಲ್ಲಿ ಲಾಭ: ಪ್ರಧಾನಿ ಮೋದಿ

ಶನಿವಾರ, 24 ಡಿಸೆಂಬರ್ 2016 (14:02 IST)
ನೋಟು ನಿಷೇಧ ಜಾರಿ ಕುರಿತಂತೆ ವಿಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿರುವ ಪ್ರಧಾನಿ ಮೋದಿ, ನೋಟು ನಿಷೇಧಧದಿಂದ ದೀರ್ಘಾವಧಿಯಲ್ಲಿ ಗ್ರಾಮಸ್ಥರಿಗೆ ರೈತರಿಗೆ ಲಾಭವಾಗಲಿದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
 
50 ದಿನಗಳೊಳಗೆ ನೋಟು ನಿಷೇಧ ಬಿಕ್ಕಟ್ಟು ಅಂತ್ಯವಾಗಲಿದೆ ಎಂದು ಹೇಳಿದ ಅವರು, ದೀರ್ಘಾವಧಿಯ ಲಾಭಕ್ಕಾಗಿ ಸ್ವಲ್ಪ ಕಷ್ಟಪಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
 
ನೋಟು ನಿಷೇಧದಿಂದ ಸ್ವಲ್ಪ ಕಾಲದವರೆಗೆ ಜನರು ತೊಂದರೆ ಅನುಭವಿಸಬೇಕಾಗಿದೆ. ಆದರೆ, ದೀರ್ಘಾವಧಿಯಲ್ಲಿ ಅದರ ಲಾಭವನ್ನು ಜನತೆ ಪಡೆಯಬಹುದಾಗಿದೆ. ಸರಕಾರ ಹೊಸ ಆರ್ಥಿಕ ನೀತಿಗಳನ್ನು ಜಾರಿಗೆ ತಂದು ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುತ್ತದೆ ಎನ್ನುವ ಭರವಸೆ ನನಗಿದೆ ಎಂದರು.
 
ಕೇಂದ್ರ ಸರಕಾರದ ನಿರ್ಧಾರದಿಂದ ದೇಶದ ಜನತೆ ತತ್ತರಿಸಿ ಹೋಗಿದ್ದು, ಭಾರಿ ಪ್ರಮಾಣದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೋದಿ ಸರಕಾರದ ಕ್ರಮವನ್ನು ವ್ಯಾಪಕವಾಗಿ ಟೀಕಿಸಿವೆ.
 
ದೇಶದ ಶೇ.99 ರಷ್ಟು ಜನತೆಯನ್ನು ತೊಂದರೆಗೆ ಸಿಲುಕಿಸಿದ್ದಲ್ಲದೇ ಕಪ್ಪು ಹಣ ಹೊಂದಿದ ಶೇ.1 ರಷ್ಟು ಭಾರಿ ಶ್ರೀಮಂತರನ್ನು ಗುರಿಯಾಗಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ